ತೂಮಿನಾಡು: ಮುಕ್ತ ವಾಲಿಬಾಲ್ ಪಂದ್ಯಾಟಕ್ಕೆ ಸಜ್ಜಾದ ಕುಂಜತ್ತೂರು ಹಳೆ ಆರ್ ಟಿ ಒ ಮೈದಾನ: ಇಂದು ಸಂಜೆ 7 ಗಂಟೆಗೆ ಬಲಿಷ್ಟ ತಂಡಗಳ ರೋಮಾಂಚಕ ಆಟ

Saturday, November 19 2016
img

ಕುಂಜತ್ತೂರು: (www.asiavisionnews.com) : ನವ ಶಕ್ತಿ ಫ್ರೆಂಡ್ಸ್ ತೂಮಿನಾಡು ಕುಂಜತ್ತೂರು ಇದರ 35 ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಮುಕ್ತ ವಾಲಿಬಾಲ ಪಂದ್ಯಾಟಕ್ಕೆ ತೂಮಿನಾಡು ಕುಂಜತ್ತೂರು ಹಳೆ ಆರ್ ಟಿ ಒ ಮೈದಾನ ಸಜ್ಜಾಗಿದೆ.

ಇಂದು ಶನಿವಾರ ಸಂಜೆ 7 ಗಂಟೆಗೆ ಕೇರಳ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ ಸುರೇಂದ್ರನ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ನಿವೃತ ಕಾಸರಗೋಡು ಜಿಲ್ಲಾ ವಾಲಿಬಾಲ್ ಕ್ಯಾಪ್ಟನ್ ನಿರ್ಮಲ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಪಿ ಬಿ ಅಬ್ದುಲ್ ರಜಾಕ್, ಮಾಜಿ ಶಾಸಕ ಸಿ ಎಚ್ ಕುಂಞಂಬು, ಗ್ರಾ. ಪಂ. ಸದಸ್ಯೆ ಮುಶ್ರತ್ ಜಹಾನ್, ತಲಪಾಡಿ ಮರಿಯಾಶ್ರಮ ಧರ್ಮಗುರು ವಂದನೀಯ ನೆಲ್ಸನ್ ವಲಿವೆರ ಸೇರಿದಂತೆ ಹಲವು ಗಣ್ಯರು ಉಪಸ್ಥರಿರುವರು. ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ ತಹಶೀಲ್ದಾರ್ ಕೆ ಪಿ ಸೋಮಶೇಖರ್ ತೂಮಿನಾಡು, ನಿವೃತ ಶಿಕ್ಷಕರಾದ ಎಂ ಈಶ್ವರ ತೂಮಿನಾಡು, ಕೆ ಕೃಷ್ಣಪ್ಪ ಪೂಜಾರಿ, ಉದ್ಯಮಿ ಮೋಹನ್ ಶೆಟ್ಟಿ ತೂಮಿನಾಡು, ಪತ್ರಕರ್ತ ಅಬ್ದುಲ್ ರಹ್ಮಾನ್ ಉದ್ಯಾವರ ಹಾಗೂ ತೂಮಿನಾಡು ಮಹಾಕಾಳಿ ದೇವಸ್ಥಾನ ಅಧ್ಯಕ್ಷ ಜಯಂತ ಎಂ ಮೊಂಟಪದವು ಉಪಸ್ಥರಿರುವರು.

ಈಗಾಗಲೇ ಹಲವಾರು ತಂಡಗಳ ಹೆಸರುಗಳು ನೋಂದಾವಣೆಯಾಗಿವೆ. ರೋಮಂಚಕ ಪಂದ್ಯಾಟದಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ 25 ಸಾವಿರ ರೂ. ನಗದು ಹಾಗೂ ಟ್ರೋಪಿ, ಧ್ವಿತೀಯ ಬಹುಮಾನ 15 ಸಾವಿರ ರೂ. ನಗದು ಹಾಗೂ ಟ್ರೋಪಿ, ತೃತೀಯ ಬಹುಮಾನ 5 ಸಾವಿರ ರೂ. ನಗದು ಹಾಗೂ ಟ್ರೋಪಿ ಹಾಗೂ ನಾಲ್ಕನೇ ಬಹುಮಾನ 3 ಸಾವಿರ ರೂ. ನಗದು ಹಾಗೂ ಟ್ರೋಪಿ ನೀಡಲಿರುವುದಾಗಿ ಪ್ರಕಟನೆ ತಿಳಿಸಿದೆ.

Comments