cilt bakim urunleri ko cuce sesli sohbet sesli panelci sesli sohbet Elektronik Sigara al

ರೊನಾಲ್ಡೊ ನನ್ನ ಸ್ಫೂರ್ತಿ ವಿರಾಟ್ ಕೊಹ್ಲಿ ಜನಪ್ರಿಯ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೊ ನನಗೆ ಪ್ರೇರಣೆಯಾಗಿದ್ದಾರೆ ಎಂದು ಕೊಹ್ಲಿ ಹೇಳಿಕೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ರೊನಾಲ್ಡೊ ನನ್ನ ಸ್ಫೂರ್ತಿ ವಿರಾಟ್ ಕೊಹ್ಲಿ ಜನಪ್ರಿಯ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೊ ನನಗೆ ಪ್ರೇರಣೆಯಾಗಿದ್ದಾರೆ ಎಂದು ಕೊಹ್ಲಿ ಹೇಳಿಕೆ

Monday, January 02 2017
img

ಬೆಂಗಳೂರು (www.asiavisionnews.com): ಜನವರಿ 02 : ತಮಗೆ ಸ್ಪೂರ್ತಿ ತುಂಬುವ ಆಟಗಾರ ಯಾರು ಎಂಬುದನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಹೇಳಿಕೊಂಡಿದ್ದಾರೆ.

ಜನಪ್ರಿಯ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೊ ನನಗೆ ಪ್ರೇರಣೆಯಾಗಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಗೆ ನೀಡಿದ ಸಂದರ್ಶನದ ವೇಳೆಯಲ್ಲಿ ಕೊಹ್ಲಿ ಅವರು ನನಗೆ ರೊನಾಲ್ಡೊ ಪ್ರೇರಣೆ ನೀಡುತ್ತಾರೆ. ರೊನಾಲ್ಡೊ ಅವರ ಪರಿಶ್ರಮ, ಯಶಸ್ಸು ಎಲ್ಲರಿಗೂ ಮಾದರಿ ಎಂದಿದ್ದಾರೆ. ಮೆಸ್ಸಿ ಕೂಡಾ ರೊನಾಲ್ಡೊರಂಥೆ ಪ್ರತಿಭಾವಂತ ಆದರೆ, ಪರಿಶ್ರಮದ ವಿಷಯದಲ್ಲಿ ರೊನಾಲ್ಡೊ ಅವರನ್ನು ಮೀರಿಸುವವರಿಲ್ಲ. ಅವರ ಪ್ರತಿಭೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ನಾವು ಕಾಣಬಹುದಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಪೋರ್ಚುಗಲ್ ತಂಡದ ಪರ ಆಡಿ ಯುರೋ ಕಪ್, ರಿಯಲ್ ಮ್ಯಾಡ್ರಿಡ್ ಪರ ಆಡಿ ಯುಇಎಫ್ಎ ಚಾಂಪಿಯನ್ಸ್ ಲೀಗ್ ಗೆದ್ದಿದ್ದಾರೆ ಜತೆಗೆ ಬಲಾನ್ ಡಿ ಓರ್ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ರೊನಾಲ್ಡೊ ಇದ್ದಾರೆ. ಕೊಹ್ಲಿ ಅವರು 35 ಅಂತಾರಾಷ್ಟ್ರೀಯ ಪಂದ್ಯಗಳಿಂದ 2515 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಜನವರಿ 15ರ ನಂತರ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಟಿ20ಐ ಪಂದ್ಯಗಳಲ್ಲಿ ಆಡಲು ಉತ್ಸುಕರಾರುವುದಾಗಿ ಕೊಹ್ಲಿ ಹೇಳಿದ್ದಾರೆ.

Comments