cilt bakim urunleri ko cuce sesli sohbet sesli panelci sesli sohbet
ನಾಯಕತ್ವ ತೊರೆದ ಧೋನಿಗೆ ಯುವರಾಜ್ ಆತ್ಮೀಯ ಬೀಳ್ಕೊಡುಗೆ, ವಿಡಿಯೋ ವೈರಲ್ : ನಾಯಕನಾಗಿ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ನೀಡಿದಕ್ಕೆ ಯುವರಾಜ್ ಧೋನಿಗೆ ಧನ್ಯವಾದ ಹೇಳಿದರು | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ನಾಯಕತ್ವ ತೊರೆದ ಧೋನಿಗೆ ಯುವರಾಜ್ ಆತ್ಮೀಯ ಬೀಳ್ಕೊಡುಗೆ, ವಿಡಿಯೋ ವೈರಲ್ : ನಾಯಕನಾಗಿ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ನೀಡಿದಕ್ಕೆ ಯುವರಾಜ್ ಧೋನಿಗೆ ಧನ್ಯವಾದ ಹೇಳಿದರು

Wednesday, January 11 2017
img

ಮಹೇಂದ್ರ ಸಿಂಗ್ ಧೋನಿ ನಾಯಕ್ವತದ ಕೊನೆಯ ಪಂದ್ಯದ ಬಳಿಕ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಧೋನಿ ಜತಗೂಡಿ ತಮ್ಮ 10 ವರ್ಷದ ಕ್ರಿಕೆಟ್ ಬದುಕು ಮತ್ತು ಸ್ನೇಹದ ಕುರಿತು ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಯುವರಾಜ್ ಧೋನಿಯನ್ನು ನಿಮ್ಮ ವೃತ್ತಿ ಜೀವನದ ಕುರಿತು ಪ್ರಶ್ನಿಸಿದಾಗ? ಧೋನಿ ನಿಜಕ್ಕೂ ಹತ್ತು ವರ್ಷಗಳ ಕ್ರಿಕೆಟ್ ಬದುಕು ಹರ್ಷದಾಯಕವಾಗಿತ್ತು ಎಂದರು. ಇದೇ ವೇಳೆ ಯುವರಾಜ್ ಧೋನಿ ನಾಯಕತ್ವದಲ್ಲಿ ನಾವು ಮೂರು ಪ್ರಖ್ಯಾತ ಟೂರ್ನಿಗಳನ್ನು ಗೆದ್ದಿದ್ದೇವೆ. ಏಕದಿನ ವಿಶ್ವಕಪ್. ಟಿ20 ವಿಶ್ವಕಪ್ ಮತ್ತು ಚಾಂಪಿಯನ್ ಟ್ರೋಫಿಯನ್ನು ಗೆದ್ದಿರುವುದಾಗಿ ಯುವರಾಜ್ ಸಿಂಗ್ ಹೇಳಿದ್ದಾರೆ.

ಇದೇ ವೇಳೆ ಧೋನಿ ಸಹ ಒಂದೇ ಓವರ್ ನಲ್ಲಿ 6 ಸಿಕ್ಸರ್ ಬಾರಿಸಿದ ಯುವರಾಜ್ ಕಾರ್ಯವನ್ನು ಶ್ಲಾಘಿಸಿದರು. ನಾಯಕನಾಗಿ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ನೀಡಿದಕ್ಕೆ ಯುವರಾಜ್ ಧೋನಿಗೆ ಧನ್ಯವಾದ ಹೇಳಿದರು. ಕೊನೆಗೆ ನಾಯಕತ್ವಕ್ಕೆ ವಿದಾಯ ಹೇಳಿರುವ ನೀವು ದೊಡ್ಡ ಸಿಕ್ಸರ್ ಗಳನ್ನು ಬಾರಿಸಬೇಕು ಎಂದು ಯುವರಾಜ್ ಕೇಳಿದಾಗ, ಧೋನಿ ಸಮಯ, ಸಂದರ್ಭ, ಅನಿವಾರ್ಯ ಎದುರಾದರೆ ಸಿಕ್ಸರ್ ಬಾರಿಸುವ ಭರವಸೆ ನೀಡಿದರು.

Comments