Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಆಲಡ್ಕ : ಲೈಫ್ ಆನ್ ವಾರಿಯರ್ಸ್ ಬೊಳ್ಳಾಯಿ ತಂಡಕ್ಕೆ ಪ್ರತಿಷ್ಠಿತ ಬಿಪಿಎಲ್ ಟ್ರೋಫಿ

Tuesday, March 29 2016
img

ಬಂಟ್ವಾಳ [ www.asiavisionnews.com ] : ತಾಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂಬಂತೆ ಭೂಯಾ ಗೈಸ್ ಪಾಣೆಮಂಗಳೂರು ಇವರು ಆಲಡ್ಕ ಮೈದಾನದಲ್ಲಿ ಸಂಘಟಿಸಿದ ಐತಿಹಾಸಿಕ ಬಂಟ್ವಾಳ ಪ್ರೀಮಿಯರ್ ಲೀಗ್ (ಬಿಪಿಎಲ್)-2016 ಕ್ರಿಕೆಟ್ ಟೂರ್ನಮೆಂಟ್‍ನ ಫೈನಲ್ ಹಣಾಹಣಿಯಲ್ಲಿ ಇಬ್ರಾಹಿಂ ನಂದಾವರ ಮಾಲಕತ್ವದ ಎಂ.ಎಂ. ಕಿಂಗ್ಸ್ ನಂದಾವರ ತಂಡವನ್ನು 6 ವಿಕೆಟ್‍ಗಳಿಂದ ಭರ್ಜರಿಯಾಗಿ ಹಿಮ್ಮೆಟ್ಟಿಸಿದ ಇಕ್ಬಾಲ್ ಬೊಳ್ಳಾಯಿ ಮಾಲಕತ್ವದ ಲೈಫ್ ಆನ್ ವಾರಿಯರ್ಸ್ ಬೊಳ್ಳಾಯಿ ತಂಡ ಬಿಪಿಎಲ್ ಟ್ರೋಫಿ ಹಾಗೂ ರೂ. 60,666/- ನಗದು ಬಹುಮಾನವನ್ನು ಒಳಗೊಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಲೈಫ್ ಆನ್ ವಾರಿಯರ್ಸ್ ತಂಡದ ಇಂತಿಯಾಝ್ ಅಕ್ಕರಂಗಡಿ ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರೆ, ಅದೇ ತಂಡದ ಶಾಕಿರ್ ವಾಮದಪದವು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅದೇ ತಂಡದ ದೀಪಕ್ ಉತ್ತಮ ದಾಳಿಗಾರರಾಗಿ ಮೂಡಿಬಂದರೆ, ಎಂ.ಎಂ. ಕಿಂಗ್ಸ್ ನಂದಾವರ ತಂಡದ ಆಟಗಾರ ನವಾಝ್ ಉತ್ತಮ ದಾಂಡಿಗ ಪ್ರಶಸ್ತಿಯನ್ನು ಪಡೆದುಕೊಂಡರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಯುವ ಸಮೂಹವನ್ನು ಜಾತಿ-ಮತ ಬೇಧ ಮರೆತು ಸೌಹಾರ್ದತೆಯ ಕೊಂಡಿಯಲ್ಲಿ ಪೋಣಿಸುವ ಏಕೈಕ ಕ್ಷೇತ್ರವಾಗಿ ಇವತ್ತು ಕ್ರೀಡಾ ಕ್ಷೇತ್ರ ಮಾತ್ರ ಉಳಿದುಕೊಂಡಿದೆ. ಈ ನಿಟ್ಟಿನಲ್ಲಿ ನಾಡಿನಾದ್ಯಂತ ಸೌಹಾರ್ದ ಕ್ರೀಡಾಕೂಟಗಳನ್ನು ಏರ್ಪಡಿಸುವ ಮೂಲಕ ಸಮಾಜದ ಶಾಂತಿ-ಸೌಹಾರ್ದತೆಯನ್ನು ಎತ್ತಿ ಹಿಡಿಯಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಪಂದ್ಯಾವಳಿಯ ಪ್ರಮುಖ ಪ್ರಾಯೋಜಕ ಪಾಣೆಮಂಗಳೂರು-ಮೆಲ್ಕಾರ್ ಉಲ್ಲಾಸ್ ಐಸ್‍ಕ್ರೀಂ ಮಾಲಕ ಉದಯ ಪೈ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ) ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ಬಿ.ಸಿ.ರೋಡು, ಬಂಟ್ವಾಳ ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಮಾಜಿ ಸದಸ್ಯ ಹಾಜಿ ಪಿ. ಮುಹಮ್ಮದ್ ರಫೀಕ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಉಲ್ಲಾಸ್ ಐಸ್‍ಕ್ರೀಂ ಮಾರ್ಕೆಟಿಂಗ್ ಮ್ಯಾನೇಜರ್ ಅಬ್ದುಲ್ ಹಕೀಂ ಪಾಣೆಮಂಗಳೂರು, ಪ್ರಮುಖರಾದ ಪ್ರಕಾಶ್ ಕಾರಂತ ನರಿಕೊಂಬು, ಬೇಬಿ ಕುಂದರ್, ಹಾಮದ್ ಬಾವಾ ಯಾಸೀನ್, ಹಸೈನಾರ್ ಶಾಂತಿಅಂಗಡಿ, ಸಮದ್ ಕೈಕಂಬ, ಇಕ್ಬಾಲ್ ಬೊಳ್ಳಾಯಿ, ಕಾಸಿಂ ಶಾಂತಿಅಂಗಡಿ, ಇಬ್ರಾಹಿಂ ನಂದಾವರ, ಬದ್ರುದ್ದೀನ್ ಆಲಾಡಿ, ಪಿ.ಎಂ. ಅಬ್ದುಲ್ ರಹಿಮಾನ್ ಮೆಲ್ಕಾರ್, ಪಿ.ಬಿ. ಅಹ್ಮದ್ ಹಾಜಿ ಪಾಣೆಮಂಗಳೂರು, ಇರ್ಶಾದ್ ಗುಡ್ಡೆಅಂಗಡಿ, ರವಳನಾಥ ನಾಯಕ್, ಪ್ರಸನ್ನ ಕುಮಾರ್, ಬ್ರಿಯಾನ್ ಲಾರಾ ಮೆಲ್ಕಾರ್, ಅಬ್ದುಲ್ ಹಮೀದ್ ಮಾರ್ನಬೈಲು, ದುರ್ಗಾದಾಸ್ ಪಾಣೆಮಂಗಳೂರು, ಗಣೇಶ್ ಶೆಣೈ ಬಂಟ್ವಾಳ, ಅಬ್ದುಲ್ ಅಝೀಝ್ ಆಲಡ್ಕ, ಹಸನಬ್ಬ ಬಂಗ್ಲೆಗುಡ್ಡೆ, ಭುವನೇಶ್ ಬಂಗ್ಲೆಗುಡ್ಡೆ, ಖಲಂದರ್ ಶಾಫಿ ನಂದಾವರ ಮೊದಲಾದವರು ಮುಖ್ಯ ಅತಿಥಿಳಾಗಿ ಭಾಗವಹಿಸಿದ್ದರು.
ಭೂಯಾ ಗೈಸ್ ಪ್ರಮುಖರಾದ ಶಫೀಕ್ ಉಪ್ಪುಗುಡ್ಡೆ, ಶರೀಫ್ ನಂದಾವರ, ಅಝ್ಮಲ್ ಉಪ್ಪುಗುಡ್ಡೆ, ಮುಸ್ತಫಾ ಬಂಗ್ಲೆಗುಡ್ಡೆ, ಝುಬೈರ್ ಬಂಗ್ಲೆಗುಡ್ಡೆ, ಫಾರೂಕ್ ಆಲಡ್ಕ, ಉಸ್ಮಾನ್ ಬಾಬಾ ಉಪ್ಪುಗುಡ್ಡೆ, ಇಕ್ಬಾಲ್ ಸಜಿಪ, ಹನೀಫ್ ಮೆಲ್ಕಾರ್, ಝಹೀರ್ ಬೋಗೋಡಿ, ಸಿದ್ದೀಕ್ ಉಪ್ಪುಗುಡ್ಡೆ, ಸಿದ್ದೀಕ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ಟೂರ್ನಿಯ ಪ್ರಮುಖ ಪ್ರಾಯೋಜಕ ಉದಯ ಪೈ ಉಲ್ಲಾಸ್ ಅವರನ್ನು ಸನ್ಮಾನಿಸಲಾಯಿತು.
ಪ್ರತಿಷ್ಠಿತ ಈ ಟೂರ್ನಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು. ಇಕ್ಬಾಲ್ ಬೊಳ್ಳಾಯಿ ಮಾಲಕತ್ವದ ಲೈಫ್ ಆನ್ ವಾರಿಯರ್ಸ್ ಬೊಳ್ಳಾಯಿ, ಇಬ್ರಾಹಿಂ ನಂದಾವರ ಮಾಲಕತ್ವದ ಎಂ.ಎಂ. ಕಿಂಗ್ಸ್ ನಂದಾವರ, ಅನ್ವರ್ ಸಾದಾತ್ ಗೂಡಿನಬಳಿ ಮಾಲಕತ್ವದ ಗೂಡಿನಬಳಿ ಟೈಗರ್ಸ್, ಝಕರಿಯಾ ಮೆಲ್ಕಾರ್ ಮಾಲಕತ್ವದ ಲಾನ್ಸರ್ ಲೀಪ್ಸ್ ಮೆಲ್ಕಾರ್, ಕಾಸಿಂ ಶಾಂತಿ ಅಂಗಡಿ ಮಾಲಕತ್ವದ ಡಿವಿಶ್ ಸ್ಟಾರ್ ಕೈಕಂಬ, ತಿಲಕ್‍ರಾಜ್ ಮಾಲಕತ್ವದ ಮಂಡಾಡಿ ಬುಲ್ಸ್, ಸಜ್ಜಾದ್ ಹಾಗೂ ಇಬ್ರಾಹಿಂ ಕೆ.ಎಚ್. ಕಲ್ಲಡ್ಕ ಮಾಲಕತ್ವದ ಝಡ್.ಬಿ. ಕಲ್ಲಡ್ಕ, ನಾಗೇಶ್ ಬಂಟ್ವಾಳ ಹಾಗೂ ಶಮೀರ್ ನಂದಾವರ ಮಾಲಕತ್ವದ ಬಂಟ್ವಾಳ ಪ್ಯಾಂಥರ್ಸ್ ತಂಡಗಳು ಭಾಗವಹಿಸಿದ್ದವು.
ಭೂಯಾ ಗೈಸ್ ಪ್ರಮುಖರಾದ ಶರೀಫ್ ಬೋಗೋಡಿ ಸ್ವಾಗತಿಸಿ, ಶಮೀರ್ ನಂದಾವರ ವಂದಿಸಿದರು. ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಸಲ್ಮಾನುಲ್ ಫಾರಿಶ್ ನಂದಾವರ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು. ಶಹೀದ್ ಗುಡ್ಡೆಅಂಗಡಿ, ಹಾರಿಸ್ ಕುಕ್ಕಾಜೆ, ಪ್ರಶಾಂತ್ ಬಂಟ್ವಾಳ ಹಾಗೂ ನಿಯಾಝ್ ಫರಂಗಿಪೇಟೆ ವೀಕ್ಷಕ ವಿವರಣೆ ನೀಡಿದರು. ಇಕ್ಬಾಲ್ ಮಂಗಳೂರು, ವಿವೇಕಾನಂದ ಮಂಗಳೂರು, ರಫೀಕ್ ನೆಹರುನಗರ ಹಾಗೂ ಸುರೇಂದ್ರ ಮೆಲ್ಕಾರ್ ತೀರ್ಪುಗಾರರಾಗಿ ಸಹಕರಿಸಿದರು.
ಚಿತ್ರ : 28 ಮಾ ಬಿಪಿಎಲ್

Comments