Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಜುಲೈ 28ರಂದು ಪ್ರೊ ಕಬಡ್ಡಿ ಆರಂಭ: ಹೈದರಾಬಾದ್‌ನಲ್ಲಿ ಉದ್ಘಾಟನೆ; ಬೆಂಗಳೂರಿನಲ್ಲಿ 11 ಪಂದ್ಯ

Thursday, June 29 2017
img

ಮುಂಬೈ(www.asiavisionnews.com) : ಕ್ರೀಡಾಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಪ್ರೊ ಕಬಡ್ಡಿ ಲೀಗ್‌ನ ಐದನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಜುಲೈ 28ರಂದು ಹೈದರಾಬಾದ್‌ನಲ್ಲಿ ಲೀಗ್‌ ಆರಂಭವಾಗಲಿದ್ದು, ಬರೋಬ್ಬರಿ 90 ದಿನ ನಡೆಯಲಿದೆ.

ಇಲ್ಲಿನ ಗ್ರ್ಯಾಂಡ್‌ ಹಯಾಟ್‌ ಹೋಟೆಲ್‌ನಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಆಟಗಾ ರರು ಹಾಗೂ ತಂಡಗಳ ಮಾಲೀಕರ ಸಮ್ಮುಖದಲ್ಲಿ ಲೀಗ್‌ ಕಮಿಷನರ್‌ ಅನುಪಮ್‌ ಗೋಸ್ವಾಮಿ ಹಾಗೂ ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ ಸಿಇಒ ದೇವರಾಜ್‌ ಚತುರ್ವೇದಿ ವೇಳಾಪಟ್ಟಿ ಬಿಡುಗಡೆ ಮಾಡಿದರು.

ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ಹಾಗೂ ತಮಿಳು ತಲೈವಾಸ್‌ ಪೈಪೋಟಿ ನಡೆಸಲಿವೆ. ಅಕ್ಟೋಬರ್‌ 28ರಂದು ಚೆನ್ನೈನಲ್ಲಿ ಫೈನಲ್‌ ಪಂದ್ಯ ಜರುಗಲಿದೆ. ಬೆಂಗಳೂರಿನಲ್ಲಿ ಆಗಸ್ಟ್‌ 4ರಿಂದ 10ರವರೆಗೆ 11 ಪಂದ್ಯಗಳು ನಡೆಯಲಿವೆ.

ಈ ಬಾರಿಯ ಲೀಗ್‌ ವೇಳಾಪಟ್ಟಿ ಸುದೀರ್ಘವಾಗಿರುವುದಕ್ಕೆ ತುಸು ವಿರೋಧ ವ್ಯಕ್ತವಾಯಿತು. ಆದರೆ, 12 ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಹೆಚ್ಚು ದಿನಗಳ ಆಯೋಜನೆ ಅನಿ ವಾರ್ಯ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

ಈ ಬಾರಿ ತಂಡಗಳ ಸಂಖ್ಯೆ 12ಕ್ಕೇರಿದೆ. ಈ ತಂಡಗಳು 130 ಪಂದ್ಯಗಳನ್ನು ಆಡಲಿವೆ. ಎರಡು ಗುಂಪುಗಳನ್ನಾಗಿ ವಿಂಗಡಿಸಿದ್ದು ಪ್ರತಿ ತಂಡಕ್ಕೆ 22 ಪಂದ್ಯಗಳು ಇರಲಿವೆ. ಐಪಿಎಲ್‌ ಮಾದರಿಯಲ್ಲಿ ಈ ಬಾರಿ ಪ್ಲೇ ಆಫ್‌ ಪಂದ್ಯಗಳು ನಡೆಯಲಿವೆ.

Comments