Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಉತ್ತಮ ಮಾರ್ಗದರ್ಶನ : ಭಾರತ ‘ಎ’ ತಂಡದ ಕೋಚ್ ಆಗಿ ದ್ರಾವಿಡ್ ಮುಂದುವರಿಕೆ

Saturday, July 01 2017
img

ನವದೆಹಲಿ(www.asiavisionnews.com) : ‘ಭಾರತ ‘ಎ’ ಹಾಗೂ 19 ವರ್ಷದೊಳಗಿನವರ ತಂಡಗಳಿಗೆ ಕೋಚ್ ಆಗಿ ರಾಹುಲ್‌ ದ್ರಾವಿಡ್ ಮುಂದುವರಿಯಲಿದ್ದಾರೆ’ ಎಂದು ಶುಕ್ರವಾರ ಬಿಸಿಸಿಐ ಪ್ರಕಟಿಸಿದೆ. ಮುಂದಿನ ಎರಡು ವರ್ಷಗಳಿಗೆ ರಾಹುಲ್ ದ್ರಾವಿಡ್ ಈ ತಂಡಗಳ ಕೋಚ್ ಆಗಿ ಕೆಲಸ ಮಾಡಲಿದ್ದಾರೆ.

ಎರಡೂ ತಂಡಗಳಿಗೂ ದ್ರಾವಿಡ್‌ 2015ರಲ್ಲಿ ಕೋಚ್ ಆಗಿ ನೇಮಕ ಗೊಂಡಿದ್ದರು. ಇವರ ಮಾರ್ಗದರ್ಶನದಲ್ಲಿ ಯುವ ತಂಡಗಳು ತವರಿನಲ್ಲಿ ಹಾಗೂ ವಿದೇಶಿ ನೆಲದಲ್ಲಿ ನಡೆದ ಪಂದ್ಯಗಳಲ್ಲಿ ಶ್ರೇಷ್ಠ ಸಾಧನೆ ಮಾಡಿವೆ. ಕೋಚ್ ಆಗಿ ನೇಮಕಗೊಂಡ ಬಳಿಕ ಭಾರತ ‘ಎ’ ತಂಡ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯನ್ನು ಗೆದ್ದುಕೊಂಡಿತ್ತು. ಇಲ್ಲಿ ಮೂರನೇ ತಂಡವಾಗಿ ದಕ್ಷಿಣ ಆಫ್ರಿಕಾ ಆಡಿತ್ತು.

ದ್ರಾವಿಡ್ ಮಾರ್ಗದರ್ಶನದಲ್ಲಿ 19 ವರ್ಷದೊಳಗಿನವರ ತಂಡ 2016ರ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿತ್ತು. ‘ಹಿಂದಿನ ಎರಡು ವರ್ಷಗಳಲ್ಲಿ ದ್ರಾವಿಡ್ ಯುವ ತಂಡಗಳ ಸಾಧನೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸುಪ್ತ ಪ್ರತಿಭೆಗಳನ್ನು ಗುರುತಿಸುವ ಕೆಲಸ ವನ್ನು ಅವರು ಮಾಡಿದ್ದಾರೆ’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ ಖನ್ನಾ ಹೇಳಿದ್ದಾರೆ.

‘ದ್ರಾವಿಡ್ ಇನ್ನೂ ಎರಡು ವರ್ಷ ಜೂನಿಯರ್ ತಂಡಗಳಿಗೆ ಮಾರ್ಗ ದರ್ಶನ ನೀಡಲಿರುವುದು ನಮ್ಮ ಅದೃಷ್ಟ. ಭಾರತ ತಂಡದಲ್ಲಿ ಮುಂದಿನ ದಿನಗಳಲ್ಲಿ ಯುವ ಆಟಗಾರರ ಸಂಖ್ಯೆ ಹೆಚ್ಚುವ ವಿಶ್ವಾಸವಿದೆ. ಭಾರತ ಕ್ರಿಕೆಟ್‌ಗೆ ಅವರ ಕೊಡುಗೆ ಅಪಾರ’ ಎಂದು ಅವರು ಹೇಳಿದ್ದಾರೆ.

‘ಶಿಸ್ತು ಮತ್ತು ಬದ್ಧತೆಯಿಂದಾಗಿ ದ್ರಾವಿಡ್ ಎಲ್ಲರ ಮನಸ್ಸಿನಲ್ಲಿಯೂ ಮನೆ ಮಾಡಿದ್ದಾರೆ. ಯುವ ಆಟಗಾರರ ಸಾಧನೆಗೆ ಅವರು ಮೆಟ್ಟಿಲಾಗಿದ್ದಾರೆ’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಹೇಳಿದ್ದಾರೆ.

ಡೆಲ್ಲಿ ಡೇರ್‌ಡೆವಿಲ್ಸ್ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ
ಭಾರತ ಜೂನಿಯರ್ ತಂಡದ ಕೋಚ್ ಜವಾಬ್ದಾರಿಯನ್ನು ಒಪ್ಪಿಕೊಂಡಿರುವ ರಾಹುಲ್ ದ್ರಾವಿಡ್‌ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ರಾಹುಲ್ ದ್ರಾವಿಡ್‌ ಅವರ ಸಲಹೆಗಳು ನಮ್ಮ ತಂಡದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ಆದರೆ ಅವರು ಭಾರತ ಜೂನಿಯರ್ ತಂಡಗಳ ಕೋಚ್ ಸ್ಥಾನವನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಅವರು ನಮ್ಮೊಂದಿಗೆ ಕೆಲಸ ಮಾಡದಿರುವುದು ಬೇಸರ ತರಿಸಿದೆ’ ಎಂದು ಡೇರ್‌ಡೆವಿಲ್ಸ್ ಸಿಇಒ ಹೇಮಂತ್‌ ದುವಾ ಹೇಳಿದ್ದಾರೆ.

Comments