Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮೊದಲ ಟೆಸ್ಟ್‌ ಪಂದ್ಯ: ದ್ವಿಶತಕ ವಂಚಿತ ಶಿಖರ್‌ ಧವನ್‌, ಪೂಜಾರ ಶತಕ: ಬೃಹತ್‌ ಮೊತ್ತದತ್ತ ಭಾರತ

Wednesday, July 26 2017
img

ಗಾಲ್‌ ((www.asiavisionnews.com) : ಇಲ್ಲಿನ ಗಾಲ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅತಿಥೇಯ ಶ್ರೀಲಂಕಾ –ಭಾರತ ತಂಡಗಳ ನಡುವೆ ಮೊದಲ ಟೆಸ್ಟ್‌ ‍ಪಂದ್ಯ ಬುಧವಾರ ಆರಂಭವಾಗಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ಭಾರತ 90 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 399 ರನ್‌ ಗಳಿಸಿದೆ.

ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 90 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 399 ರನ್‌ ಗಳಿಸಿದೆ.(ಅಭಿನವ್‌ ಮುಕುಂದ್‌ 12, ಶಿಖರ್‌ ಧವನ್‌ 190, ವಿರಾಟ್‌ ಕೊಹ್ಲಿ 03, ಚೇತೇಶ್ವರ್‌ ಪೂಜಾರ ಬ್ಯಾಟಿಂಗ್‌ 144, ರಹಾನೆ ಬ್ಯಾಟಿಂಗ್‌ 39)
ಖರ್‌ ಧವನ್‌ (190), ಚೇತೇಶ್ವರ್‌ ಪೂಜಾರ ಬ್ಯಾಟಿಂಗ್‌(144) ಉತ್ತಮ ಜತೆಯಾಟದ ನೆರೆವಿನಿಂದ ಶ್ರೀಲಂಕಾ ತಂಡದ ವಿರುದ್ಧ ಭಾರತ ಬೃಹತ್‌ ಮೊತ್ತ ಪೇರಿಸಿತ್ತು.

ಎರಡು ವರ್ಷಗಳ ನಂತರ ವಿರಾಟ್‌ ಕೊಹ್ಲಿ ಪಡೆಯು ಈ ಕ್ರೀಡಾಂಗಣದಲ್ಲಿ ಟೆಸ್ಟ್‌ ಪಂದ್ಯ ಆಡುತ್ತಿದ್ದು, ಇದರೊಂದಿಗೆ ಮೂರು ಟೆಸ್ಟ್‌ ಪಂದ್ಯಗಳ ಸರಣಿಗೆ ಚಾಲನೆ ದೊರೆತಿದೆ.

Comments