Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮೊಯಿನ್ ಅಲಿ ಹ್ಯಾಟ್ರಿಕ್: ಇಂಗ್ಲೆಂಡ್ ತಂಡಕ್ಕೆ ಜಯ: ಡೀನ್ ಎಲ್ಗರ್ ಶತಕ ವ್ಯರ್ಥ

Tuesday, August 01 2017
img

ಲಂಡನ್ (www.asiavisionnews.com); ಸ್ಪಿನ್ನರ್ ಮೊಯಿನ್ ಅಲಿ ಅವರ ಹ್ಯಾಟ್ರಿಕ್ ಬಲದಿಂದ ಇಂಗ್ಲೆಂಡ್ ತಂಡವು ಸೋಮವಾರ ಇಲ್ಲಿ ಮುಕ್ತಾಯವಾದ ಟೆಸ್ಟ್‌ ಪಂದ್ಯದಲ್ಲಿ 239 ರನ್‌ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಜಯಿಸಿತು.

ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ 492 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡವು 252 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆಫ್‌ಸ್ಪಿನ್ನರ್ ಮೊಯಿನ್ ಅಲಿ ಅವರು 76ನೇ ಓವರ್‌ನಲ್ಲಿ ಡೀನ್ ಎಲ್ಗರ್, ಕಗಿಸೊ ರಬಾಡ ಮತ್ತು ಮಾರ್ನ್ ಮಾರ್ಕೆಲ್ ಅವರ ವಿಕೆಟ್‌ಗಳನ್ನು ಕಬಳಿಸಿ ಹ್ಯಾಟ್ಟಿಕ್ ಸಾಧನೆ ಮಾಡಿದರು. ಇದರಿಂದಾಗಿ ಏಕಾಂಗಿ ಹೋರಾಟ ನಡೆಸಿದ್ದ ಡೀನ್ ಎಲ್ಗರ್ ಅವರ ಇನಿಂಗ್ಸ್‌ಗೂ ತೆರೆಬಿತ್ತು.

ಸಂಕ್ಷಿಪ್ತ ಸ್ಕೋರು

ಇಂಗ್ಲೆಂಡ್: 353 ಮತ್ತು 8ಕ್ಕೆ313 ಡಿಕ್ಲೆರ್ಡ್‌

ದಕ್ಷಿಣ ಆಫ್ರಿಕಾ: 175 ಮತ್ತು 252 (ಡೀನ್ ಎಲ್ಗರ್ 136, ತೆಂಬಾ ಬಾವುಮಾ 32, ರೋಲಂಡ್ ಜೋನ್ಸ್‌ 72ಕ್ಕೆ3, ಬೆನ್ ಸ್ಟೋಕ್ಸ್‌ 51ಕ್ಕೆ2, ಮೊಯಿನ್ ಅಲಿ 45ಕ್ಕೆ4)

ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 239 ರನ್‌ಗಳ ಜಯ.

Comments