Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ವರ್ಕಾಡಿ ಕೆಪಿಎಲ್-2 ಕಬಡ್ಡಿ ಪಂದ್ಯಾಟ : ಶಿವಶಕ್ತಿ ಕುಂಜತ್ತೂರು ಚಾಂಪ್ಯನ್

Monday, April 04 2016
img

ಮಂಜೇಶ್ವರ [ www.asiavisionnews.com ] :ಇಲ್ಲಿನ ವರ್ಕಾಡಿ ಧರ್ಮನಗರದಲ್ಲಿ ಕಾಸರಗೋಡು ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಹಾಗೂ ಮಂಜೇಶ್ವರ ಕಬಡ್ಡಿ ಅಕಾಡಮಿ ಮತ್ತು ಡ್ರೀಮ್ ಬಾಯ್ಸ್ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ನಡೆದ ಕಬಡ್ಡಿ ಪ್ರೀಮಿಯರ್ ಲೀಗ್ ಟು ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಶಿವಶಕ್ತಿ ಕುಂಜತ್ತೂರು ತಂಡ ಪಡೆದುಕೊಂಡು ಚಾಂಪಿಯನ್ನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.ದ್ವೀತಿಯ ಸ್ಥಾನವನ್ನು ಮೀಂಜ ಬುಲ್ಸ್ ಹಾಗೂ ತೃತೀಯ ಸ್ಥಾನವನ್ನು ಯೂ ಅಂಗಡಿ ಮುಗರು ಮತ್ತು ಚತುಷ್ಠ ಸ್ಥಾನವನ್ನು ಚಕ್ಲಿಸ್ ಕಿಂಗ್ ಟೈಗರ್ ತಂಡವು ಪಡೆದುಕೊಂಡಿದೆ. .ಪಂದ್ಯಾಟದಲ್ಲಿ ಆಲ್ ರೌಂಡರ್ ಆಗಿ ಮೀಂಜ ಬುಲ್ಸ್ ನ ಸಾಗರ್ ಆಯ್ಕೆಯಾದರು.ಉತ್ತಮ ದಾಂಡಿಗನಾಗಿ ನಿಕಿಲ್ ಹಾಗೂ ಉತ್ತಮ ಕ್ಯಾಚರ್ ಆಗಿ ಶಿವಶಕ್ತಿ ತಂಡದ ಸಾಲೀಕ್ ಪ್ರಶಸ್ತಿಗೆ ಪಾತ್ರರಾದರು. .ಸಮಾರೋಪ ಸಮಾರಂಭದಲ್ಲಿ ಮಲಯಾಳಂ ಚಲನಚಿತ್ರ ನಟ ಅನೂಪ್ ಚಂದ್ರನ್,ಮಂಜೇಶ್ವರದ ಮಾಜಿ ಶಾಸಕರಾದ ಸಿಎಚ್ ಕುಂಞಂಬು,ಮಂಜೇಶ್ವರ ಬ್ಲಾಕ್ ಪಂ ಉಪಾಧ್ಯಕ್ಷೆ ಮಮತಾ ದಿವಕಾರ,ಕಾಸರಗೋಡು ಜಿಲ್ಲಾ ಪಂ ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರ್ಷಾದ್ ವರ್ಕಾಡಿ,ಎಬಿ ಚಾಯ್ಸ್ ಮಾಲಕರಾದ ಸಲಾಂ,ಯೂನಿವರ್ಸಲ್ ಗ್ರೂಪ್ ಮಾಲಕರಾದ ಅಬ್ದುಲ್ ಲತೀಫ್ ಸುಂಕದಕಟ್ಟೆ,ಮುಹಮ್ಮದ್ ಹಾಜಿ ಹೋನೆಸ್ಟ್,ಉಮ್ಮರ್ ಒಡಂಗಳ ಕಬ್ಬಡ್ಡಿ ಅಸೋಸಿಯೇಶನ್ ನ ಸುಧೀರ್ ಕುಮಾರ್ , ಪತ್ರಕರ್ತ ಆರಿಫ್ ಮಚ್ಚಂಪಾಡಿ , ಇರ್ಷಾದ್ ಮಂಜೇಶ್ವರ , ಅಬ್ದುಲ್ ಜಬ್ಬಾರ್ ಐಪಿ,ಇಕ್ಬಾಲ್ ಕಳಿಯೂರು,ಸಲಾಂ ವರ್ಕಾಡಿ,ಸುರೇಶ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Comments