antalya otogar rent a car ordu haberleri likit satın al - instagram türk takipçi al instagram yavaş beğeni satın al ko cuce

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಿಂದ ಸುನಿಲ್, ಪ್ರಕಾಶ್‌ಗೆ ಅರ್ಜುನ ಗೌರವ ಪ್ರಶಸ್ತಿ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಿಂದ ಸುನಿಲ್, ಪ್ರಕಾಶ್‌ಗೆ ಅರ್ಜುನ ಗೌರವ ಪ್ರಶಸ್ತಿ

Wednesday, August 30 2017
img

ನವದೆಹಲಿ (www.asiavisionnews.com): ‘ಕಳೆದ 12 ವರ್ಷಗಳಿಂದ ಹಾಕಿ ಆಡುತ್ತಿದ್ದೇನೆ. ದೇಶಕ್ಕಾಗಿ ಕಾಣಿಕೆ ನೀಡಿದ ಹೆಮ್ಮೆ ನನಗಿದೆ. ಇದೀಗ ಅರ್ಜುನ ಪ್ರಶಸ್ತಿ ಗೌರವ ಲಭಿಸಿರುವುದು ಅಪಾರ ಸಂತಸ ತಂದಿದೆ’ ಎಂದು ಭಾರತ ಹಾಕಿ ತಂಡದ ಆಟಗಾರ, ಕರ್ನಾಟಕದ ಎಸ್‌.ವಿ. ಸುನಿಲ್ ಹೇಳಿದ್ದಾರೆ.

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಸುನಿಲ್ ಪ್ರಶಸ್ತಿ ಸ್ವೀಕರಿಸಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ಶೂಟಿಂಗ್ ಪಟು ಪ್ರಕಾಶ್ ನಂಜಪ್ಪ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತ ಹಾಕಿ ತಂಡದ ಆಟಗಾರ ಸರ್ದಾರ್ ಸಿಂಗ್, ಪ್ಯಾರಾ ಅಥ್ಲೀಟ್ ದೇವೇಂದ್ರ ಜಜಾರಿಯಾ ಅವರಿಗೆ ರಾಜೀವಗಾಂಧಿ ಖೇಲ್‌ರತ್ನ ಪ್ರಶಸ್ತಿ ನೀಡಲಾಯಿತು. ವಿ.ಜೆ. ಸುರೇಖಾ (ಆರ್ಚರಿ), ಕುಶ್ಬೀರ್ ಸಿಂಗ್ (ಅಥ್ಲೆಟಿಕ್ಸ್‌), ಅರೊಕಿನ್ ರಾಜೀವ್ (ಅಥ್ಲೆಟಿಕ್ಸ್), ಪ್ರಶಾಂತ್ ಸಿಂಗ್ (ಬ್ಯಾಸ್ಕೆಟ್‌ಬಾಲ್), ಎಲ್‌. ದೇವೆಂದ್ರೊ ಸಿಂಗ್ (ಬಾಕ್ಸಿಂಗ್), ಹರ್ಮನ್‌ಪ್ರೀತ್ ಕೌರ್ (ಕ್ರಿಕೆಟ್), ಒಯಿನಮ್ ಬೆಂಬೆಮ್ ದೇವಿ (ಫುಟ್‌ಬಾಲ್), ಎಸ್‌.ಎಸ್‌.ಪಿ. ಚೌರಾಸಿಯಾ (ಗಾಲ್ಫ್‌), ಜಸ್ವೀರ್ ಸಿಂಗ್ (ಕಬಡ್ಡಿ), ಅಂತೋಣಿ ಅಮಲ್‌ರಾಜ್ (ಟಿಟಿ), ಸಾಕೇತ್ ಮೈನೇನಿ(ಟೆನಿಸ್), ಸತ್ಯವ್ರತ್ ಕಡಿಯಾನ (ಕುಸ್ತಿ), ಮರಿಯಪ್ಪನ್ ತಂಗವೇಲು (ಪ್ಯಾರಾಆಥ್ಲೀಟ್), ವರುಣ್ ಬಾಟಿ (ಪ್ಯಾರಾ ಅಥ್ಲೀಟ್) ಅವರಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕ್ರಿಕೆಟಿಗ ಚೇತೇಶ್ವರ್ ಪೂಜಾರ ಗೈರುಹಾಜರಾಗಿದ್ದರು.

Comments