Monday, December 16, 2019
ದುಬೈ(www.asiavisionnews.com) : ಐಸಿಸಿ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಗುರುವಾರ ಬಿಡುಗಡೆಯಾದ ನೂತನ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ಒಂದು ಸ್ಥಾನ ಕಳೆದುಕೊಂಡಿದೆ.
ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ 1–1ರಲ್ಲಿ ಸಮಬಲ ಮಾಡಿಕೊಂಡಿರುವ ಆಸ್ಟ್ರೇಲಿಯಾ ತಂಡ ಐದನೇ ಸ್ಥಾನಕ್ಕೆ ಕುಸಿದಿದೆ. ಈ ಸರಣಿಗೂ ಮೊದಲು ಸ್ಟೀವನ್ ಸ್ಮಿತ್ ಬಳಗ 100 ಪಾಯಿಂಟ್ಸ್ಗಳಿಂದ ನಾಲ್ಕನೇ ಸ್ಥಾನದಲ್ಲಿ ಇತ್ತು.
ಆಸ್ಟ್ರೇಲಿಯಾದ ಬಳಿ 97 ಪಾಯಿಂಟ್ಸ್ಗಳು ಇವೆ. 1–0ರಲ್ಲಿ ಸರಣಿ ಗೆದ್ದಿದ್ದರೂ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಉಳಿಸಿಕೊಳ್ಳುತ್ತಿತ್ತು. ದಕ್ಷಿಣ ಆಫ್ರಿಕಾ 110 ಪಾಯಿಂಟ್ಸ್ಗಳಿಂದ ಎರಡನೇ ಸ್ಥಾನದಲ್ಲಿದೆ.