Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಕಠಿಣ ಅಭ್ಯಾಸ ನಡೆಸಿ ಮುಂದಿನ 10 ವರ್ಷ ಉತ್ತಮ ಆಟವಾಡುತ್ತೇನೆ: ವಿರಾಟ್‌ ಕೊಹ್ಲಿ ಭರವಸೆ

Saturday, September 09 2017
img

ನವದೆಹಲಿ (www.asiavisionnews.com): : ‘ಪ್ರಸುತ್ತ ಆಡುತ್ತಿರುವ ಉತ್ತಮ ಆಟವನ್ನು ಮುಂದಿನ ಹತ್ತು ವರ್ಷ ಕಾಲ ಆಡಲು ಬಯಸುತ್ತೇನೆ’ ಎಂದು ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೊಹ್ಲಿ, ‘ನಮ್ಮ ಸಾಮರ್ಥ್ಯ ಅರಿಯದಿದ್ದರೆ ನಾವು ಹೇಗೆ ಬೆಳೆಯಬೇಕು ಎಂಬುದು ತಿಳಿಯುವುದಿಲ್ಲ. ಇದಕ್ಕೆ ಸಮಯದ ಕೊರತೆ ಇರಬಹುದು; ಆದರೆ, ನಮ್ಮಗೆ ಗೊತಿಲ್ಲದೆ ಶೇಕಡಾ 70ರಷ್ಟು ಸಾಮರ್ಥ್ಯವನ್ನು ನಾವು ಹೊಂದಿರುತ್ತೇವೆ. ಉದಾಹರಣೆಗೆ ನಾನು ಉತ್ತಮವಾಗಿ ಆಡಲು ಕಠಿಣ ಅಭ್ಯಾಸ ನಡೆಸುತ್ತೇನೆ. ಇದರಿಂದ ಮುಂದಿನ ಹತ್ತು ವರ್ಷ ಕಾಲ ಉತ್ತಮ ಆಟವನ್ನು ಆಡುತ್ತೇನೆ’ ಎಂದಿದ್ದಾರೆ.

ಸದ್ಯ 60 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಕೊಹ್ಲಿ 4658 ರನ್‌, 194 ಏಕದಿನ ಪಂದ್ಯಗಳಲ್ಲಿ 8587 ರನ್‌ ಗಳಿಸಿದ್ದಾರೆ.

Comments