antalya otogar rent a car Elektronik Sigara al ordu haberleri fatsa haberleri ordu haberleri sesli chat sesli chat yemek tarifleri

ಇಂದಿನಿಂದ ಹುಬ್ಬಳ್ಳಿಯಲ್ಲಿ ಚುಟುಕು ಕ್ರಿಕೆಟ್‌ ಸಂಭ್ರಮ: ಅಗ್ರಸ್ಥಾನದ ಮೇಲೆ ಟೈಗರ್ಸ್‌ ಕಣ್ಣು: ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜು | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಇಂದಿನಿಂದ ಹುಬ್ಬಳ್ಳಿಯಲ್ಲಿ ಚುಟುಕು ಕ್ರಿಕೆಟ್‌ ಸಂಭ್ರಮ: ಅಗ್ರಸ್ಥಾನದ ಮೇಲೆ ಟೈಗರ್ಸ್‌ ಕಣ್ಣು: ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜು

Thursday, September 14 2017
img

ಹುಬ್ಬಳ್ಳಿ(www.asiavisionnews.com) : ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಹುಬ್ಬಳ್ಳಿ ಟೈಗರ್ಸ್ ತಂಡ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಕ್ರಿಕೆಟ್‌ ಟೂರ್ನಿಯ ಆರನೇ ಆವೃತ್ತಿಯ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದ ಮೇಲೆ ಕಣ್ಣು ಇಟ್ಟಿದೆ.

ಇದಕ್ಕಾಗಿ ‘ತವರಿನ’ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಗುರುವಾರ ಇಲ್ಲಿ ನಡೆಯಲಿರುವ ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿ ಟೈಗರ್ಸ್ ತಂಡ ಮೈಸೂರು ವಾರಿಯರ್ಸ್‌ ಎದುರು ಪೈಪೋಟಿ ನಡೆಸಲಿದೆ.

ಟೂರ್ನಿಯ ಆರಂಭದಿಂದಲೂ ಟೈಗರ್ಸ್ ಪಡೆ ಉತ್ತಮ ಪ್ರದರ್ಶನ ನೀಡಿದೆ. ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಪಡೆದು ಒಂದರಲ್ಲಿ ಸೋತು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿರುವ ಬೆಳಗಾವಿ ಪ್ಯಾಂಥರ್ಸ್‌ ಮತ್ತು ಟೈಗರ್ಸ್ ತಂಡಗಳು ತಲಾ ಆರು ಪಾಯಿಂಟ್ಸ್‌ ಹೊಂದಿವೆ. ಆದರೆ ರನ್‌ ಸರಾಸರಿ ಆಧಾರದ ಮೇಲೆ ಪ್ಯಾಂಥರ್ಸ್‌ ಮೊದಲ ಸ್ಥಾನ ಪಡೆದುಕೊಂಡಿದೆ.

ಟೈಗರ್ಸ್ ತಂಡ ಹಿಂದಿನ ಪಂದ್ಯಗಳಲ್ಲಿ ಪ್ಯಾಂಥರ್ಸ್‌್, ಬೆಂಗಳೂರು ಬ್ಲಾಸ್ಟರ್ಸ್‌್ ಮತ್ತು ನಮ್ಮ ಶಿವಮೊಗ್ಗ ವಿರುದ್ಧದ ಪಂದ್ಯಗಳಲ್ಲಿ ಗೆಲುವು ಪಡೆದಿತ್ತು. ವಿಶೇಷವೆಂದರೆ ಈ ಮೂರೂ ಪಂದ್ಯಗಳಲ್ಲಿ ಗುರಿ ಬೆನ್ನಟ್ಟಿಯೇ ಜಯ ಸಾಧಿಸಿತ್ತು. ಕೊನೆಯ ಪಂದ್ಯದಲ್ಲಿ ಬಿಜಾಫುರ ಬುಲ್ಸ್‌ ವಿರುದ್ಧ ಸೋತಿತ್ತು. ಆಗ ಟೈಗರ್ಸ್‌ ಮೊದಲು ಬ್ಯಾಟ್‌ ಮಾಡಿತ್ತು.

ಅನುಭವಿ ಆಟಗಾರರಾದ ವಿನಯ್‌ ಕುಮಾರ್‌, ಮಯಾಂಕ್‌ ಅಗರವಾಲ್‌, ಅಭಿಷೇಕ್‌ ರೆಡ್ಡಿ ಅವರು ಟೈಗರ್ಸ್ ತಂಡಕ್ಕೆ ಬಲ ತುಂಬಲಿದ್ದಾರೆ. ಟೈಗರ್ಸ್‌ ತಂಡ ಎರಡು ಲೀಗ್ ಪಂದ್ಯಗಳನ್ನು ಆಡಬೇಕಿದೆ. ಇದರಲ್ಲಿ ಒಂದು ಪಂದ್ಯ ಜಯಿಸಿದರೂ ಸೆಮಿಫೈನಲ್‌ ತಲುಪಲಿದೆ.

ಕುತೂಹಲದ ಹಣಾಹಣಿ: ಗುಂಪಿನಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಹೊಂದಿರುವ ಪ್ಯಾಂಥರ್ಸ್‌, ಟೈಗರ್ಸ್‌್, ನಮ್ಮ ಶಿವಮೊಗ್ಗ ಮತ್ತು ಮೈಸೂರು ವಾರಿಯರ್ಸ್‌ ತಂಡಗಳು ನಾಕೌಟ್ ಪ್ರವೇಶಿಸುವ ಲೆಕ್ಕಾಚಾರದಲ್ಲಿವೆ. ಆದ್ದರಿಂದ ಉಳಿದ ಲೀಗ್‌ ಪಂದ್ಯಗಳು ಪ್ರತಿ ತಂಡಕ್ಕೂ ಮಹತ್ವದ್ದೆನಿಸಿವೆ. ಮೊದಲ ಬಾರಿಗೆ ಟೂರ್ನಿಯಲ್ಲಿ ಆಡುತ್ತಿರುವ ಬೆಂಗಳೂರು ಬ್ಲಾಸ್ಟರ್ಸ್‌್ ಒಂದೂ ಪಂದ್ಯದಲ್ಲಿ ಗೆಲುವು ಪಡೆದಿಲ್ಲ.  ಈ ತಂಡ ಟೂರ್ನಿಯಿಂದ ಈಗಾಗಲೇ ಹೊರ ಬಿದ್ದಿದೆ.

ಮೈಸೂರು ವಾರಿಯರ್ಸ್‌ ತಂಡ, ಬ್ಲಾಸ್ಟರ್ಸ್‌ ಮತ್ತು ಬಿಜಾಪುರ ಬುಲ್ಸ್‌ ಎದುರು ಗೆಲುವು ಪಡೆದಿತ್ತು. ಉಳಿದ ಎರಡು ಪಂದ್ಯಗಳಲ್ಲಿ ಪ್ಯಾಂಥರ್ಸ್‌ ಮತ್ತು ಹಾಲಿ ಚಾಂಪಿಯನ್‌ ಬಳ್ಳಾರಿ ಟಸ್ಕರ್ಸ್‌ ವಿರುದ್ಧ ಸೋತಿದೆ. ಸಮಸೋಲು, ಸಮ ಗೆಲುವುಗಳನ್ನು ಪಡೆದಿರುವ ಮೈಸೂರು ತಂಡಕ್ಕೆ ನಾಕೌಟ್‌ ತಲುಪುವ ನಿಟ್ಟಿನಲ್ಲಿ ಉಳಿದ ಪಂದ್ಯಗಳು ಅಗ್ನಿಪರೀಕ್ಷೆ ಎನಿಸಿವೆ.

ಕಠಿಣ ತಾಲೀಮು:
ಸೋಮವಾರ ನಗರಕ್ಕೆ ಬಂದಿರುವ ಟೈಗರ್ಸ್ ತಂಡದ ಆಟಗಾರರು ಒಂದು ದಿನ ವಿಶ್ರಾಂತಿ ಪಡೆದು ಬುಧವಾರ ಅಭ್ಯಾಸ ನಡೆಸಿದರು.
ನಾಯಕ ವಿನಯ್‌ ಫಿಟ್‌ನೆಸ್‌ ಮತ್ತು ಬ್ಯಾಟಿಂಗ್‌ ಅಭ್ಯಾಸಕ್ಕೆ ಒತ್ತು ಕೊಟ್ಟರು. ಮಯಾಂಕ್‌ ಹೆಚ್ಚು ಹೊತ್ತು ಫೀಲ್ಡಿಂಗ್ ತಾಲೀಮು ಮಾಡಿದರು. ವಾರಿಯರ್ಸ್‌ ಆಟಗಾರರೂ ನೆಟ್ಸ್‌ನಲ್ಲಿ ಬೆವರಿಳಿಸಿದರು.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

* ನಮ್ಮ ತಂಡ ಒಂದೂ ಸಲ ಪ್ರಶಸ್ತಿ ಜಯಿಸಿಲ್ಲ. ಎರಡು ಬಾರಿ ಫೈನಲ್‌ ಪ್ರವೇಶಿಸಿದ್ದರೂ ಗೆಲುವು ಪಡೆಯಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಗೆಲ್ಲುವ ವಿಶ್ವಾಸವಿದೆ
– ಮನ್ಸೂರ್‌ ಅಲಿಖಾನ್‌, ಕೋಚ್‌, ಹುಬ್ಬಳ್ಳಿ ಟೈಗರ್ಸ್‌

Comments