Monday, December 16, 2019
ನವದೆಹಲಿ (WWW.ASIAVISIONNEWS.COM) : ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶಿಫಾರಸು ಮಾಡಿದೆ. ಭಾರತದ ಕ್ರಿಕೆಟ್ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವುದರಿಂದ ಅವರು ಈ ಪ್ರಶಸ್ತಿಗೆ ಅರ್ಹ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.
‘ಪದ್ಮ ಪ್ರಶಸ್ತಿಗೆ ಈ ಬಾರಿ ಮಂಡಳಿ ಒಂದು ಹೆಸರನ್ನು ಮಾತ್ರ ಶಿಫಾರಸು ಮಾಡಿದೆ. ಭಾರತ ತಂಡದ ಯಶಸ್ವಿ ನಾಯಕ ಎಂದು ಕರೆಸಿಕೊಳ್ಳುವ ದೋನಿ ಹೆಸರನ್ನು ಕಳುಹಿಸಲು ಅವಿರೋಧವಾಗಿ ನಿರ್ಧರಿಸಲಾಯಿತು. ಭಾರತಕ್ಕೆ ಎರಡು ವಿಶ್ವಕಪ್ಗಳನ್ನು ಗೆದ್ದುಕೊಟ್ಟ ಅವರನ್ನು ಈ ಪ್ರಶಸ್ತಿಗೆ ಶಿಫಾರಸು ಮಾಡಿದ್ದು ಸರಿಯಾದ ನಿರ್ಧಾರವಾಗಿದೆ’ ಎಂದು ಮಂಡಳಿಯ ಪ್ರಭಾರ ಅಧ್ಯಕ್ಷ ಸಿ.ಕೆ.ಖನ್ನಾ ಸುದ್ದಿಸಂಸ್ಥೆಗೆ ತಿಳಿಸಿದರು.
ದೋನಿ ಅವರಿಗೆ ಈಗಾಗಲೇ ರಾಜೀವ್ ಗಾಂಧಿ ಖೇಲ್ ರತ್ನಾ ಪ್ರಶಸ್ತಿ ಸಂದಿದೆ.