Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಐ.ಪಿ.ಎಲ್ : ಪಂಜಾಬ್ ವಿರುದ್ದ ಪಂದ್ಯದಲ್ಲಿ ಕೊಲ್ಕತ್ತಾಗೆ 6 ವಿಕೆಟ್ ಜಯ

Wednesday, April 20 2016
img

ಮೊಹಾಲಿ [ www.asiavisionnews.com ] : ಐಪಿಎಲ್ 9ನೇ ಆವೃತ್ತಿಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ 6 ವಿಕೆಟ್ ಗಳಿಂದ ಜಯ ಸಾಧಿಸಿದೆ.
ಪಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 8 ವಿಕೆಟ್ ನಷ್ಟಕ್ಕೆ ಕೇವಲ 138 ರನ್ ಗಳಿಸಿತು. ಸುಲಭ ರನ್ ಗುರಿ ಬೆನ್ನಟ್ಟಿದ ಕೋಲ್ಕತ್ತಾ 17.1 ಓವರ್ ಗಳಲ್ಲಿ 4 ವಿಕೆಟ್ ಗೆ 141 ರನ್ ಪೇರಿಸಿ ಗೆಲವು ಸಾಧಿಸಿತು.
ಕೋಲ್ಕತ್ತಾ ಪರ ರಾಬಿನ್ ಉತ್ತಪ್ಪ 53, ಗೌತಮ್ ಗಂಭೀರ್ 34, ಮನೀಷ್ ಪಾಂಡೆ 12, ಶಕೀಬ್ 11, ಸೂರ್ಯಕುಮಾರ್ ಅಜೇಯ 11 ಹಾಗೂ ಯೂಸೂಫ್ ಪಠಾಣ್ 12 ರನ್ ಸಿಡಿಸಿದ್ದಾರೆ.
ಪಂಜಾಬ್ ಪರ ಅಕ್ಷರ್ ಪಟೇಲ್, ಪ್ರದೀಪ್ ಸಾಹು ತಲಾ 2 ವಿಕೆಟ್ ಪಡೆದ್ದಾರೆ.
ಪಂಜಾಬ್ ಪರ ಮುರಳಿ ವಿಜಯ್ 26, ಮನನ್ ವೊಹ್ತಾ 8, ಶಾನ್ ಮಾರ್ಷ್ 56, ವೃದ್ಧಿಮಾನ್ 8, ಮಿಲ್ಲರ್ 6, ಮ್ಯಾಕ್ಸ್ ವೆಲ್ 4, ಅಕ್ಷರ್ ಪಟೇಲ್ 9, ಮೋಹಿತ್ 1, ಪ್ರದೀಪ್ ಸಾಹು 1, ಕೈಲ್ ಅಬೋಟ್ ಅಜೇಯ 12 ರನ್ ಗಳಿಸಿದ್ದಾರೆ.
ಕೋಲ್ಕತ್ತಾ ಪರ ಮಾರ್ನ್ ಮಾರ್ಕೆಲ್, ಸುನೀಲ್ ನಾರಾಯಣ್ ತಲಾ 2 ವಿಕೆಟ್ ಪಡೆದರೆ, ಉಮೇಶ್ ಯಾದವ್, ಪೀಯುಷ್ ಚಾವ್ಲಾ ಹಾಗೂ ಯೂಸುಫ್ ಪಠಾಣ್ ತಲಾ 1 ವಿಕೆಟ್ ಪಡೆದಿದ್ದಾರೆ.

Comments