antalya otogar rent a car ordu haberleri fatsa haberleri - instagram türk takipçi al yemek tarifleri

ಕೆ ಸಿ ಎಫ್ ಅಬುದಾಬಿ ವತಿಯಿಂದ ಅಬ್ಬಾಸ್ ಉಸ್ತಾದ್ ರವರಿಗೆ ಗೌರವಾರ್ಪಣೆ | ASIAVISION NEWS
Flash News
മഞ്ചേശ്വരം എം.എല്‍.എ പി.ബി.അബ്ദുള്‍ റസാഖ് അന്തരിച്ചു...

ಕೆ ಸಿ ಎಫ್ ಅಬುದಾಬಿ ವತಿಯಿಂದ ಅಬ್ಬಾಸ್ ಉಸ್ತಾದ್ ರವರಿಗೆ ಗೌರವಾರ್ಪಣೆ

Friday, May 13 2016
img

ಅಬುದಾಬಿ [ www.asiavisionnews.com ] : ಅಲ್ ಮದೀನ ಮಂಞನಾಡಿ ಇದರ ಅಧ್ಯಕ್ಷರಾದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರಿಗೆ ಕೆ ಸಿ ಎಫ್ ಅಬುಧಾಬಿ ವತಿಯಿಂದ ಭವ್ಯ ಸ್ವಾಗತ ಹಾಗೂ ಸನ್ಮಾನವನ್ನು ನೀಡಿ ಗೌರವಿಸಲಾಯಿತು.
ಅಬುಧಾಬಿ ಕೆ ಸಿ ಎಫ್ ಕಛೇರಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೆ ಸಿ ಎಫ್ ಅಬುಧಾಬಿ ಇದರ ಅಧ್ಯಕ್ಷರಾದ ಬಹು ಮುಹಮ್ಮದ್ ಕುಂಞಿ ಸಖಾಫಿ ಈಶ್ವರಮಂಗಲ ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆ ಸಿ ಎಫ್ ಐ ಎನ್ ಸಿ ಸಂಘಟನಾ ಕಾರ್ಯದರ್ಶಿ ಪಿ ಎಂ ಅಬ್ದುಲ್ ಹಮೀದ್ ಈಶ್ವರಮಂಗಲ ಅಬ್ಬಾಸ್ ಉಸ್ತಾದ್ ಹಾಗೂ ಅಲ್ ಮದೀನ ಮಂಞನಾಡಿ ಇದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಇಬಾದತ್ ಗಳನ್ನು ಅಧಿಕಗೊಳಿಸಿ:- ಶರಫುಲ್ ಉಲಮಾ

​ಸನ್ಮಾನ ಸ್ವೀಕರಿಸಿ ಮಾತನಾಡಿದ ಶರಫುಲ್ ಉಲಮಾ ಉಸ್ತಾದರು ನೇರಹಾದಿಯಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಕೆ ಸಿ ಎಫ್ ಸಂಘಟನೆಗೆ ಶುಭಹಾರೈಸಿ ಅಲ್ಲಾಹನ ಆರಾಧನಾ ಕರ್ಮಗಳನ್ನು ಸಾಧ್ಯವಾದಷ್ಟು ಹೆಚ್ಚಿಸಿ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ಭದ್ರವಾಗಿ ಹಿಡಿಯಬೇಕೆಂದು ಕರೆ ನೀಡಿದರು.
ವೆದಿಕೆಯಲ್ಲಿ ಕೆ ಸಿ ಎಫ್ ಮದೀನ ಝಾಯೆದ್ ನೇತಾರರಾದ ಅಬ್ದುಲ್ ಅಝೀಝ್ ನಿಝಾಮಿ ಕೊಡಗು ಹಾಜರಿದ್ದರು. ಅಬುಧಾಬಿಯ ವಿವಿಧ ಕಡೆಗಳಿಂದ ಕೆ ಸಿ ಎಫ್ ನ ಕಾರ್ಯಕರ್ತರು ಆಗಮಿಸಿದ್ದರು. ಕೆ ಸಿ ಎಫ್ ಅಬುಧಾಬಿ ಸಂಘಟನಾ ಕಾರ್ಯದರ್ಶಿ ಕಬೀರ್ ಬಯಂಬಾಡಿ ಧನ್ಯವಾದ ಅರ್ಪಿಸಿ ಕಾರ್ಯಕ್ರಮ ನಿರೂಪಿಸಿದರು.

Comments