ದಮಾಂ : ಎನ್.ಎಂ.ಎ ಕೇಂದ್ರ ಸಮಿತಿ ಅಧ್ಯಕ್ಷರಾಗಿ ತಾಹೀರ್ ಕುಂದಾಪುರ ಪುನರಾಯ್ಕೆ .

Monday, May 16 2016
img

ವರದಿ : ಯಾಕೂಬ್ ಫೈರೋಝ್
ದಮ್ಮಾಮ್ : ಏನ್.ಎಂ.ಎ ಕೇಂದ್ರ ಸಮಿತಿ ಹಾಗೂ ದಮ್ಮಾಮ್ ಘಟಕದ ವಾರ್ಷಿಕ ಸಭೆ ಮೇ 6 ರಂದು ದಮ್ಮಾಮ್ ನ ಅಲ್ ಖಯ್ಯೂಮಾ ಹೋಟೆಲ್ ಸಭಾಂಗಣದಲ್ಲಿ ತಾಹೀರ್ ಕುಂದಾಪುರವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು.

ವೇದಿಕಯಲ್ಲಿ ರೈಸ್ಕೋ ಕಂಪೆನಿಯ ಮಾಲಕ ಅಬುಬಕ್ಕರ್ ಪಡುಬಿದ್ರಿ ಹಾಗೂ ದೆಲ್ಮೊನ್ ಕಂಪೆನಿಯ ಮಾಲಕರಾದ ಉಸ್ಮಾನ್ ಹಂಗಳೂರು ಏನ್.ಎಂ.ಎ ದಮ್ಮಾಮ್ ಘಟಕದ ಅಧ್ಯಕ್ಷ ಅಬುಬಕ್ಕರ್ ಅಲಿ, ಏನ್.ಎಂ.ಎ ರಿಯಾದ್ ಘಟಕದ ಅಧ್ಯಕ್ಷ ಸೈಯದ್ ಅಸ್ಲಂ, ಮಹಮ್ಮದ್ ಸಖಾಫಿ ಉಸ್ತಾದ್, ಕಾಟಿಪಲ ಇಸ್ಮಾಯಿಲ್ ಹಾಗೂ ಮಳೆನಾಡು ದಮ್ಮಾಮ್ ಕಮೀಟಿಯ ಅಧ್ಯಕ್ಷ ರಾದ ಬಶೀರ್ ಸಕಲೇಶಪುರರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಂದಿನ ಭಾಗವಾಗಿ ಕೇಂದ್ರ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡಿದವು.

ಏನ್.ಎಂ.ಎ ಕುಂದಾಪುರ ತಾಲ್ಲೂಕಿನ ಕೇಂದ್ರ ಸಮಿತಿ ಅಧ್ಯಕ್ಷರಾಗಿ ತಾಹಿರ್ ಕುಂದಾಪುರ ಹಾಗೂ ಉಪಾಧ್ಯಕ್ಷರಾಗಿ ಮುನಾಫ್ ಗುಲ್ವಾಡಿ ಹಾಗೂ ಅಬ್ದುಲ್ ರೆಹಮಾನ್ ಕೋಡಿ ಕಾರ್ಯದರ್ಶಿಯಾಗಿ ಮುನಾಫ್ ಕೋಡಿ ಹಾಗೂ ಜೊತೆ ಕಾರ್ಯದರ್ಶಿ ಮುಲ್ಲಾ ಮೈದೀನ್ ಕೋಡಿಠಕ ಖಜಾಂಚಿಯಾಗಿ ಕೆ.ಎಮ್ ಉಸ್ಮಾನ್ ಹಾಗೂ ಕೋಡಿ ಸುಲೈಮಾನ್ ಹಾಗೂ ಗೌರವ ಅಧ್ಯಕ್ಷರಾಗಿ ಅಬ್ದುಲ್ಲಾ ವಳಚ್ಚಿಲ್ ಆಡಿಟರಾಗಿ ಅನ್ವರ್ ಕೋಟೆಶ್ವರ ಆರ್ಗನೈಝರಾಗಿ ಉಸ್ಮಾನ್ ಹಂಗಳೂರುರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮವನ್ನು ಮಹಮ್ಮದ್ ಸಖಾಫಿ ಉಸ್ತಾದರ ದುಆದೊಂದಿಗೆ ಪ್ರಾರಂಬವಾಗಿ ಕಾಟಿಪಲ ಉಸ್ಮಾನ್ ರವರು ಉದ್ಘಾಟಿಸಿ ಬಶೀರ್ ಉಸ್ತಾದರು ಸ್ವಾಗತಿಸಿ ದಮ್ಮಾಮ್ ಘಟಕದ ಕಾರ್ಯದರ್ಶಿಯಾದ ಕೆ.ಎಮ್ ಉಸ್ಮಾನ್ ಕೋಡಿರವರು ಕಾರ್ಯಕ್ರಮವನ್ನು ನಿರುಪಿಸುದರು. ರಶೀದ್ ಮಂಗಳೂರು ಧನ್ಯವಾದಗೈದರರು. ಇಡೀ ಕಾರ್ಯಕ್ರಮದಲ್ಲಿ ಬಶೀರ್ ಉಸ್ತಾದರ ದಫ್ ಕಾರ್ಯಕ್ರಮ ಜನ ಗಮನ ಸೆಳೆಯಿತು. ಕೊನೆಯದಾಗಿ ಮೂರು ಸಲಾತ್ ನೊಂದಿಗೆ ಮುಕ್ತವಾಯಿತು.

Comments