ಸೌದಿ ಅರೇಬಿಯ್ಯಾದ ರಿಯಾದ್ ನಲ್ಲಿ ರಸ್ತೆ ಅಪಘಾತ : ಸವನೂರಿನ ಯುವಕ ಮೃತ್ಯು

Tuesday, May 24 2016
img

ಸವಣೂರು [ www.asiavisionnews.com ] : ಸೌದಿ ಅರೇಬಿಯಾದ ರಿಯಾದ್‍ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಸವಣೂರಿನ ಯುವಕನೋರ್ವ ದಾರುಣ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಸವಣೂರು ಮಾಂತೂರು ನಿವಾಸಿ, ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಝೌರಾಬಿ-ಅಬೂಬಕ್ಕರ್ ದಂಪತಿಯ ಮಗ ಶಾಫಿ ಸವಣೂರು(30ವ.)ಮೃತಪಟ್ಟವರು.ಕಳೆದ ಕೆಲವು ವರ್ಷಗಳಿಂದ ಸೌದಿಯಲ್ಲಿ ಉದ್ಯೋಗದಲ್ಲಿದ್ದ ಶಾಫಿಯವರು ಮೇ23ರಂದು ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ರಿಯಾದ್‍ನಲ್ಲಿ ಕಳೆದ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿರುವ ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ಇದರ ಉಪಾಧ್ಯಕ್ಷರಾಗಿ ಶಾಫಿ ಸವಣೂರು ಇತ್ತೀಚೆಗಷ್ಟೆ ಆಯ್ಕೆಯಾಗಿದ್ದರು.ಸವಣೂರು ಮುಸ್ಲಿಂ ವೆಲ್‍ಫೇರ್ ಎಸೋಸಿಯೇಶನ್ ರಿಯಾದ್ ಇದರ ಕೋಶಾಧಿಕಾರಿಯಾಗಿ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಅವರು ತೊಡಗಿಸಿಕೊಂಡಿದ್ದರು.ಮೃತರು ತಂದೆ, ತಾಯಿ, ಸಹೋದರರಾದ ತೌಸೀಫ್, ತಾಹಿಫ್, ಸಹೋದರಿಯರನ್ನು ಅಗಲಿದ್ದಾರೆ.

Comments