antalya otogar rent a car Elektronik Sigara al ordu haberleri fatsa haberleri ordu haberleri sesli chat

ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಾಫಿ ಸವಣೂರಿನ ಅಂತ್ಯ ಕ್ರಿಯೆಗೆ ನೆರವಾದ ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್. | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಾಫಿ ಸವಣೂರಿನ ಅಂತ್ಯ ಕ್ರಿಯೆಗೆ ನೆರವಾದ ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್.

Tuesday, May 31 2016
img

ವರದಿ : ಯಾಕೂಬ್ ಫೈರೋಝ್
ರಿಯಾದ್ [ www.asiavisionnews.com ] : ಕಳೆದ ಹಲವು ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್ ನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತಿದ್ದ ಶಾಫಿ ಸವಣೂರು ರವರು ರಿಯಾದ್ ನ ಉರೈಮಳದಲ್ಲಿ ರಸ್ತೆ ಅಪಘಾತದಲ್ಲಿ ತೀವ್ರ ತರಹದ ಗಾಯವಾಗಿ ಮೃತಪಟ್ಟಿದ್ದು. ಸುದ್ದಿ ತಿಳಿದ ತಕ್ಷಣ ಕಾರ್ಯಪ್ರವರ್ತರಾದ ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ಇಬ್ರಾಹಿಂ ಆನಾಜೆಯವರ ನೇತೃತ್ವದಲ್ಲಿ ಸಿರಾಜ್ ಸಜಿಪರವರ ತಂಡ ಆಸ್ಪತ್ರೆಗೆ ಭೇಟಿನೀಡಿದ್ದರು ಆದರೆ ಅಂದು ಮಯ್ಯತ್ ನೋಡಲು ನಿರಾಕರಿಸಿದ ಆಸ್ಪತ್ರೆಯ ಸಿಬ್ಬಂದಿಗಳು ನಾಳೆ ಬರುವಂತೆ ಸೂಚಿಸಿದರು. ಆದರೆ ಸೋಶಿಯಲ್ ಫೋರಮ್ ತಂಡ ಕುಟುಂಬದ ಸದಸ್ಯರುಗಳಾದ ಶಂಶೀರ್ ಆತೂರ್ ಹಾಗೂ ಝಕರಿಯ ಆತೂರುರವರನ್ನು ಭೇಟಿಯಾಗಿ ಸಾಂತ್ವನ ಹೇಳಿ ಮಯ್ಯತನ್ನು ಇಲ್ಲಿಯೇ ಧಫನ್ ಮಾಡುವುದು ಒಳಿತು ಅದಕ್ಕೆ ಬೇಕಾದ ಅಗತ್ಯ ದಾಖಲೆ ಪತ್ರಗಳನ್ನು ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ಮಾಹಿತಿ ನೀಡದರು. ಮರುದಿನ ಬೆಳಿಗ್ಗೆ ಇಂಡಿಯನ್ ಸೋಶಿಯಲ್ ಫೋರಮ್ ತಂಡ ಆಸ್ಪತ್ರೆಗೆ ಭೇಟಿನೀಡಿ ಮಯ್ಯತ್ ಸಂದರ್ಶನ ನಡೆಸಿ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಿ ಮಯ್ಯತ್ ಧಫನ್ ಕಾರ್ಯಕ್ಕೆ ಬೇಕಾದ ಪತ್ರವನ್ನು ಪಡೆದು ಪೋಲಿಸ್ ಠಾಣೆಗೆ ನೀಡಿ ಅಲ್ಲಿಂದ ಸಹಿ ಪಡೆದು ಕುಟುಂಬದ ಸದಸ್ಯರ ಜೊತೆ ಸೇರಿ ರಿಯಾದ್ ನ ರಾಯಭಾರಿ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆ ಪತ್ರಗಳನ್ನು ನೀಡಿ ಮಯ್ಯತ್ ನ ಧಫನ್ ಕಾರ್ಯಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ಶಾಫಿ ಸವಣೂರುರವರ ಮಯ್ಯತ್ ನಮಾಝ್ ಬುಧವಾರ 25/05/2016 ರ ಅಸರ್ ನಮಾಝಿನ ನಂತರ ರಿಯಾದ್ ನ ನಿರ್ಗಮನ 15 ರಲ್ಲಿರುವ ಅಲ್ ರಾಜ್ಹೀ ಮಸೀದಿಯಲ್ಲಿ ಕುಟುಂಬ ಸದಸ್ಯರು ಸಹಭಾಗಿತ್ವದಲ್ಲಿ ನಡೆಸಿ , ಮಯ್ಯತ್ ಧಫನ್ ಮಾಡಲಾಯಿತು. ಶಾಫಿ ಸವಣೂರುರವರ ಕುಟುಂಬ ಸದಸ್ಯರು ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರಿಗೆ ಮನದಾಳದಿಂದ ಅಭಿನಂದನೆಗಳನ್ನು ಅರ್ಪಿಸಿದರು.

Comments