cilt bakim urunleri ko cuce sesli sohbet sesli panelci sesli sohbet Elektronik Sigara al

ಸೌದಿಯಲ್ಲಿ ರಸ್ತೆ ಅಪಘಾತ : ಬಂಟ್ವಾಳದ ಮಹಿಳೆ ಮೃತ್ಯು | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಸೌದಿಯಲ್ಲಿ ರಸ್ತೆ ಅಪಘಾತ : ಬಂಟ್ವಾಳದ ಮಹಿಳೆ ಮೃತ್ಯು

Monday, June 06 2016
img

ವರದಿ : ಪಿ.ಎಂ.ಎ ಪಾಣೆಮಂಗಳೂರು
ಬಂಟ್ವಾಳ [ www.asiavisionnews.com ] : ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಬಂಟ್ವಾಳದ ಮಹಿಳೆಯೋರ್ವರು ಮೃತಪಟ್ಟು ಆಕೆಯ ಪತಿ ಹಾಗೂ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ನಡೆದಿದೆ.
ಮೃತ ಮಹಿಳೆಯನ್ನು ಬಂಟ್ವಾಳ ತಾಲೂಕು, ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಉಮೈಮಾ (38) ಎಂದು ಹೆಸರಿಸಲಾಗಿದ್ದು, ಆಕೆಯ ಪತಿ ಅಬ್ದುಲ್ ರಝಾಕ್ (41), ಮಕ್ಕಳಾದ ಆರಿಫಾ (19) ಹಾಗೂ ಮುಆದ್ (10) ಎಂಬವರು ಗಂಭೀರ ಗಾಯಗೊಂಡು ದಮ್ಮಾಮ್‍ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಬ್ದುಲ್ ರಝಾಕ್ ತನ್ನ ಪತ್ನಿಯೊಂದಿಗೆ ಕಳೆದ ಕೆಲವು ವರ್ಷಗಳಿಂದ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾದಲ್ಲೇ ವಾಸವಾಗಿದ್ದು, ಕಳೆದ ವರ್ಷವಷ್ಟೆ ಊರಿಗೆ ಬಂದು ಮರಳಿದ್ದರು ಎನ್ನಲಾಗಿದೆ. ಇಬ್ಬರು ಮಕ್ಕಳು ಊರಿನಲ್ಲೇ ವ್ಯಾಸಂಗ ಮಾಡುತ್ತಿದ್ದು, ಇದೀಗ ಶಾಲಾ ರಜೆ ಹಿನ್ನಲೆಯಲ್ಲಿ ಹೆತ್ತವರ ಜೊತೆ ಸೌದಿ ಅರೇಬಿಯಾ ಸೇರಿಕೊಂಡಿದ್ದರು. ಶಾಲಾ ಪ್ರಾರಂಭದ ದಿನ ಸಮೀಪಿಸಿದ್ದರಿಂದ ಇನ್ನೇನು ಊರಿಗೆ ಬರಲು ತಯಾರಿ ನಡೆಸುತ್ತಿದ್ದ ಮಧ್ಯೆ ಈ ಭೀಕರ ಅಪಘಾತ ಸಂಭವಿಸಿದೆ.
ಮಕ್ಕಳನ್ನು ಊರಿಗೆ ಕಳುಹಿಸುವ ಸಂಭ್ರಮದಲ್ಲಿದ್ದ ರಝಾಕ್ ದಂಪತಿ ಭಾನುವಾರ ಬೆಳಿಗ್ಗೆ ಖರೀದಿಗೆಂದು ಕಾರಿನಲ್ಲಿ ತೆರಳುತ್ತಿದ್ದ ವೇಳೆ ದಮ್ಮಾಮ್ ಸಮೀಪದ ಗಾರಿಯಾ ಎಂಬಲ್ಲಿ ಕಾರು ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಉಮೈಮಾ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ಚಾಲಕ ಅಬ್ದುಲ್ ರಝಾಕ್ ಹಾಗೂ ಇಬ್ಬರು ಮಕ್ಕಳಾದ ಆರಿಫಾ ಹಾಗೂ ಮುಆದ್ ಗಂಭೀರ ಗಾಯಗೊಂಡಿದ್ದಾರೆ. ಘಟನೆಯಿಂದ ಕಾರು ಸಂಪೂರ್ಣ ಜಖಂಗೊಂಡಿದೆ.

Comments