cilt bakim urunleri ko cuce sesli sohbet sesli panelci sesli sohbet Elektronik Sigara al

ಜೂನ್ 24 ಕ್ಕೆ ದುಬೈ ಯಲ್ಲಿ ಕೆ ಐ ಸಿ ಇಫ್ತಾರ್ ಕೂಟ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಜೂನ್ 24 ಕ್ಕೆ ದುಬೈ ಯಲ್ಲಿ ಕೆ ಐ ಸಿ ಇಫ್ತಾರ್ ಕೂಟ

Thursday, June 16 2016
img

ದುಬೈ [ www.asiavisionnews.com ] : ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೆ ಐ ಸಿ ಅಧೀನದಲ್ಲಿ ದುಬೈ ಯಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಬೃಹತ್ ಇಫ್ತಾರ್ ಕೂಟ ಕಾರ್ಯಕ್ರಮವು ಪ್ರಸಕ್ತ ವರ್ಷ ಜೂನ್ 24 ರಂದು ಆಪಲ್ ಇಂಟರ್ ನ್ಯಾಶನಲ್ ಸ್ಕೂಲ್ ಕಿಸೈಸ್ ನಲ್ಲಿ ನಡೆಯಲಿದೆ . ಕಾರ್ಯಕ್ರಮದ ರೂಪು ರೇಶಗಳ ಕುರಿತು ಸಮಾಲೋಚನಾ ಸಭೆಯಲ್ಲಿ ವಿವರಣೆಯನ್ನು ನೀಡಿದ ಇಫ್ತಾರ್ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ ರವರು , ಅನಿವಾಸಿ ದೀನೀ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸುವಂತೆ ಕೇಳಿಕೊಂಡರು. ಅಸರ್ ನಮಾಜ್ಹಿನ ಬಳಿಕ ( 4.30 ರಿಂದ ) ಸಭಾ ಕಾರ್ಯಕ್ರಮವು ಪ್ರಾರಂಭಗೊಳ್ಳಲಿದ್ದು ವಿವಿದ ರಂಗಗಲ್ಲಿ ಗುರುತಿಸಿ ಕೊಂಡಿರುವ ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ .

ಇದೆ ಸಂಧರ್ಭದಲ್ಲಿ ಕೆ ಐ ಸಿ ಕಾರ್ಯ ಚಟುವಟಿಕೆ , ಅಕಾಡೆಮಿ ವಿವರಣೆಗಳನ್ನು ಒಳಗೊಂಡ " ಕೆ ಐ ಸಿ ಕಿರು ಹೊತ್ತಿಕೆ " ಬಿಡುಗಡೆ ಗೊಳಿಸಿ ಮಾತನಾಡಿದ ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಮೊಹಿಯುದ್ದೀನ್ ಕುಟ್ಟಿ ದಿಬ್ಬ ರವರು ಪವಿತ್ರ ರಮಾದಾನ್ ತಿಂಗಳ ಪ್ರಾಮುಖ್ಯತೆಯನ್ನು ವಿವರಿಸಿ ಪರಸ್ಪರ ಸಹಕಾರದೊಂದಿಗೆ ಕಾರ್ಯಕ್ರಮದ ವಿಜಯಕ್ಕೆ ಸಹಕರಿಸುವಂತೆ ಕೇಳಿಕೊಂಡರು. ಪವಿತ್ರ ತಿಂಗಳಿನಲ್ಲಿ ದಾನ ಧರ್ಮಗಳ ನೀಡುವುದು ಪುಣ್ಯ ಕರ್ಮಗಳಲ್ಲಿ ಒಂದಾಗಿದ್ದು ಸಂಸ್ಥೆಯಲ್ಲಿ ಪ್ರಸಕ್ತ ವರ್ಷದಲ್ಲಿ ಸುಮಾರು 150 ವಿಧ್ಯಾರ್ಥಿಗಳು 10 ರಷ್ಟು ಅಧ್ಯಾಪಕ ವೃಂದವು ಕಾರ್ಯ ವೆಸಗುತ್ತಿದ್ದು ತಿಂಗಲೊಂದಕ್ಕೆ ಸುಮಾರು ಎರಡು ಲಕ್ಷಕ್ಕಿಂತಲೂ ಅಧಿಕ ಖರ್ಚು ವೆಚ್ಚಗಳು ತಗಳುತಿದ್ದು ಪಧಾಧಿಕಾರಿಗಳು ಉತ್ಸಾಹದಿಂದ ಕಾರ್ಯಪ್ರವೃತ್ತರಾಗುವಂತೆ ವಿನಂತಿಸಿಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆಯವರು ಜೂನ್ 24 ರಂದು ನಡೆಯಲಿರುವ ಇಫ್ತಾರ್ ಕೂಟ ಕಾರ್ಯಕ್ರಮದ ಯಶಸ್ಸಿಗೆ ಸರ್ವ ದೀನೀ ಪ್ರೇಮಿಗಳ ಸಹಕಾರವನ್ನು ಕೋರಿದರು. ಕಾರ್ಯಕ್ರಮದಲ್ಲಿ ಕೆ ಐ ಸಿ ಕೇಂದ್ರ ಸಮಿತಿ ಕಾರ್ಯಧ್ಯಕ್ಷರಾದ ಶರೀಫ್ ಕಾವು , ಕೇಂದ್ರ ಸಮಿತಿ ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಲಿಗೆ , ದುಬೈ ಸಮಿತಿ ಅಧ್ಯಕ್ಷರಾದ ಅಶ್ರಫ್ ಖಾನ್ ಮಾಂತೂರ್ , ಶಾರ್ಜಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ಮಣಿಲ , ದುಬೈ ಸಮಿತಿ ಕೋಶಾಧಿಕಾರಿ ಅಶ್ರಫ್ ಅರ್ಥಿಕೆರೆ , ಅಬ್ಬಾಸ್ ಕೇಕುಡೆ , ಅಬ್ದುಲ್ ರಝಾಕ್ ಸೊಂಪಾಡಿ, ರಫೀಕ್ ಅತೂರ್ ಬದ್ರುದ್ದೀನ್ ಹೆಂತಾರ್ , ಹಮೀದ್ ಮಣಿಲ , ಅನ್ವರ್ ಮಾಣಿಲ , ಅಝೀಝ್ಃ ಸೊಂಪಾಡಿ ಮೊದಲಾದವರು ಉಪಸ್ತಿತರಿದ್ದರು.

Comments