ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಉಸ್ತಾದರನ್ನು ದುಬೈಯಲ್ಲಿ ಕೆ.ಐ.ಸಿ ನಿಯೋಗ ಭೇಟಿ ; ಕೆ.ಐ.ಸಿ ವೈಖರಿಯನ್ನು ಶ್ಲಾಗಿಸಿ ಪ್ರಶಂಸಿದ ತ್ವಾಖಾ ಉಸ್ತಾದ್ .

Tuesday, June 21 2016
img

ದುಬೈ [ www.asiavisionnews.com ] : ಇತ್ತೀಚೆಗೆ ದುಬೈ ಸರಕಾರದ ಹೋಲಿ ಖುರ್ ಆನ್ ಅವಾರ್ಡ್ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ , ಸಮಸ್ತ ಕೇರಳ ಕೇಂದ್ರ ಮುಶಾವರ ಸದಸ್ಯರು ಆದ ಶೈಖುನಾ ತ್ವಾಖಾ ಉಸ್ತಾದ್ ರವರನ್ನು ಕರ್ನಾಟಕ ಇಸ್ಲಾಮಿಕ್ ಸೆಂಟರ್ ( ಕೆ ಐ ಸಿ ) ಪಧಾಧಿಕಾರಿಗಳ ನಿಯೋಗವು ಭೇಟಿಯಾಗಿ ಗಲ್ಫ್ ರಾಷ್ಟ್ರಗಳಲ್ಲಿ ಕೆ ಐ ಸಿ ನಡೆಸಿಕೊಂಡು ಬರುತ್ತಿರುವ ಸಾಮುದಾಯಿಕ ಸೇವೆಗಳನ್ನು ವಿವರಿಸಿದರು. ಈ ಸಂಧರ್ಭದಲ್ಲಿ ನಿಯೋಗದೊಂದಿಗಿದ್ದ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ರವರು ಕುಂಬ್ರ ಕೆ ಐ ಸಿ ಅಕಾಡೆಮಿಯಲ್ಲಿ ಪ್ರಸಕ್ತ ಸಮಯದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ , ಶೈಕ್ಷಣಿಕ ವರ್ಷಾರಂಭದಲ್ಲಿ ಕೈಗೊಂಡ ಕಾರ್ಯಚಟುವಟಿಕೆ , ಹೊಸ ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಮುಂದಿನ ಕಾರ್ಯ ಯೋಜನೆ , ಉದ್ದೇಶಗಳ ಸಂಪೂರ್ಣ ವಿವರಣೆಯನ್ನು ನೀಡಿದರು. ಅಲ್ಲದೆ ಪ್ರಸಕ್ತ ವರ್ಷದಲ್ಲಿ ಸುಮಾರು ನೂರೈವತ್ತು ವಿದ್ಯಾರ್ಥಿಗಳು ವಿದ್ಯಾರ್ಜನೆ ಗೈಯುತ್ತಿದ್ದು ವಿವಿದ ಹಂತಗಳಲ್ಲಿ ಕಾಮಗಾರಿಗಳನ್ನು ಕೂಡ ಕೈಗೆತ್ತಿಕೊಳ್ಳಲಾಗುತಿದೆ ಎಂದರು. ನಂತರ ಸಂಸ್ಥೆಯ ಪ್ರಗತಿಯ ಕುರಿತು ಶೈಖುನಾ ರವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡ ನಿಯೋಗವು ಮುಂದೆ ಸಂಸ್ಥೆಯಲ್ಲಿ ತಲೆ ಎತ್ತಲಿರುವ ಕಟ್ಟಡ ಕಾಮಗಾರಿಗಳ ವಿಷಯದಲ್ಲಿ ಚರ್ಚಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಶೈಖುನಾ ತ್ವಾಖಾ ಉಸ್ತಾದ್ ರವರು ಕೆ ಐ ಸಿಯ ಕಾರ್ಯ ವೈಖರಿ ಯ ಕುರಿತು ಶ್ಲಾಘನೆ ವ್ಯಕ್ತ ಪಡಿಸಿದರು. ಮುಂದೆಯೂ ಸಮುದಾಯಕ್ಕೆ ಉತ್ತಮ ಯುವ ಪೀಳಿಗೆಯನ್ನು ಸಮರ್ಪಿಸುವಲ್ಲಿ ಎಲ್ಲರೂ ಇನ್ನಷ್ಟು ಆಸಕ್ತಿಯಿಂದ ಸಂಸ್ಥೆಯೊಂದಿಗೆ ಕೈಜೋಡಿಸಿ ಸಹಕರಿಸುವಂತೆ ಕೇಳಿಕೊಂಡರು. ಈ ನಿಯೋಗದಲ್ಲಿ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೋಲ್ಪೆ , ಕೇಂದ್ರ ಸಮಿತಿ ಅಧ್ಯಕ್ಷರಾದ ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ , ದುಬೈ ಸಮಿತಿ ಗೌರವಾಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ , ಕೇಂದ್ರ ಸಮಿತಿ ಕಾರ್ಯಾಧ್ಯಕ್ಷರಾದ ಷರೀಫ್ ಕಾವು , ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ , ದುಬೈ ಸಮಿತಿ ಅಧ್ಯಕ್ಷರಾದ ಅಶ್ರಫ್ ಖಾನ್ ಮಾಂತೂರ್ , ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಅಬ್ಬಾಸ್ ಕೇಕುಡೆ , ದುಬೈ ಸಮಿತಿ ಕೋಶಾಧಿಕಾರಿ ಅಶ್ರಫ್ ಆರ್ಥಿಕೇರೆ, ಕಾರ್ಯದರ್ಶಿ ಅನ್ವರ್ ಮಾಣಿಲ , ಅಸೀಫ್ ಮರೀಲ್ , ಜಾಬೀರ್ ಬೆಟ್ಟಂಪಾಡಿ , ರಹಿಮಾನ್ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.

ದಾರುನ್ನೂರು ಎಜುಕೇಷನ್ ಸೆಂಟರ್ ಕಾಶಿಪಟ್ನ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ರಫೀ ಹೋಟೆಲ್ ಸಭಾಂಗಣದಲ್ಲಿ ನಡೆದ ಶೈಖುನಾ ತ್ವಾಖಾ ಉಸ್ತಾದ್ ರವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಕೆ ಐ ಸಿ ಕೇಂದ್ರ ಸಮಿತಿ ಪಧಾಧಿಕಾರಿಗಳು ಶೈಖುನಾ ರವರನ್ನು ಶಾಲು ಹೊದಿಸಿ ಅಭಿನಂದಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಪ್ರಪ್ರಥಮವಾಗಿ ಯು ಎ ಇ ಗೆ ಭೀಟಿ ನೀಡಿದ ಸಂಧರ್ಭವನ್ನು ನೆನಪಿಸಿಕೊಂಡು , ಖಾಝಿ ಯಾಗಿ ನಿಯುಕ್ತಿಗೊಂಡಂತಹ ಸಮಯದಲ್ಲಿ ಯು ಎ ಇ ಯಲ್ಲಿ ಬೃಹತ್ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿ ಅಬಿನಂದಿಸಿದ ಸಂಸ್ಥೆಯಾಗಿದೆ ಕರ್ನಾಟಕ ಇಸ್ಲಾಮಿಕ್ ಸೆಂಟರ್. ಆದ್ದರಿಂದ ಕೆ ಐ ಸಿ ನೀಡುತ್ತಿರುವ ಗೌರವಾಧರಗಳಿಗೆ ಅಭಾರಿಯಾಗಿದ್ದು ಹೃದಯಾಂತರಾಳದ ಕೃತಜ್ಞತೆ ಸಮರ್ಪಿಸುವುದಾಗಿ ತಿಳಿಸಿದರು.

Comments