antalya otogar rent a car Elektronik Sigara al ordu haberleri fatsa haberleri ordu haberleri sesli chat

ಪತ್ರಕರ್ತರಿಗೆ ದೇಶ ತೊರೆಯಲು ಸೂಚನೆ: ಗಂಭೀರ ಪರಿಣಾಮ ಎದುರಿಸಿ ಎಂದ ಚೀನಾ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಪತ್ರಕರ್ತರಿಗೆ ದೇಶ ತೊರೆಯಲು ಸೂಚನೆ: ಗಂಭೀರ ಪರಿಣಾಮ ಎದುರಿಸಿ ಎಂದ ಚೀನಾ

Monday, July 25 2016
img


ಬೀಜಿಂಗ್: ಕ್ಸಿನ್ಹುಆ ನ್ಯೂಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಮೂವರು ಚೀನಾ ಪತ್ರಕರ್ತರನ್ನು ಈ ತಿಂಗಳಾಂತ್ಯಕ್ಕೆ ಭಾರತ ಬಿಟ್ಟು ಹೋಗುವಂತೆ ಭಾರತ ಸೂಚಿಸಿರುವುದನ್ನು ಚೀನಾ ಗಂಭೀರವಾಗಿ ಪರಿಗಣಿಸಿದ್ದು, ಭಾರತ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ) ಸದಸ್ಯತ್ವ ವಿಚಾರಕ್ಕೆ ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ಚೀನಾ ಪತ್ರಕರ್ತರಿಗೆ ಭಾರತ ಬಿಟ್ಟು ಹೋಗುವಂತೆ ಸೂಚಿಸಿದ್ದರೆ, ಭಾರತ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಚೀನಾ ಮಾಧ್ಯಮವೊಂದು ಎಚ್ಚರಿಕೆ ನೀಡಿದೆ.
ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾ ಅಡ್ಡಗಾಲು ಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಭಾರತ ಸರ್ಕಾರ ಚೀನಾ ಪತ್ರಕರ್ತರಿಗೆ ದೇಶ ಬಿಡುವಂತೆ ಸೂಚಿಸಿದ್ದರೆ, ಗಂಭೀರ ಪರಿಣಾಮ ಎದುಸಿವುದು ಖಂಡಿತ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಸಂಪಾದಕೀಯ ಬರೆದಿದೆ. ಭಾರತ ಅನುಮಾನಾಸ್ಪದ ಬುದ್ದಿ ಹೊಂದಿದೆ, ಚೀನಾದ ಪತ್ರಕರ್ತರು ದೀರ್ಘಾವಧಿ ವೀಸಾಗೆ ಅರ್ಜಿ ಸಲ್ಲಿಸುತ್ತಾರೋ, ತಾತ್ಕಾಲಿಕ ವೀಸಾಗೆ ಅರ್ಜಿ ಸಲ್ಲಿಸುತ್ತಾರೋ ವಿಷಯವಲ್ಲ, ಆದರೆ ಅವರಿಗೆ ಸಮಸ್ಯೆಗಳಂತೂ ಎದುರಾಗಲಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. ಭಾರತ ಚೀನಾ ಪತ್ರಕರ್ತರಿಗೆ ದೇಶಬಿಡುವಂತೆ ಸೂಚಿಸಿರುವುದಕ್ಕೆ ಚೀನಾ ಸಹ ಪ್ರತಿಕ್ರಿಯೆ ನೀಡಬೇಕು, ಚೀನಾ ವೀಸಾ ಸಹ ಸುಲಭವಾಗಿ ಸಿಗುವುದಿಲ್ಲ ಎಂಬುದನ್ನು ಕೆಲವು ಭಾರತೀಯರಿಗಾದರೂ ತೋರಿಸಬೇಕು ಎಂದೂ ಗ್ಲೋಬಲ್ ಟೈಮ್ಸ್ ಹೇಳಿದೆ.

Comments