antalya otogar rent a car Elektronik Sigara al ordu haberleri fatsa haberleri ordu haberleri sesli chat

ಮುಂಬೈಯ 26/11 ಭಯೋತ್ಪಾದಕ ದಾಳಿಯ ಪ್ರಮುಖ ಶಂಕಿತ ಪಾಕಿಸ್ತಾನದಲ್ಲಿ ಬಂಧನ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮುಂಬೈಯ 26/11 ಭಯೋತ್ಪಾದಕ ದಾಳಿಯ ಪ್ರಮುಖ ಶಂಕಿತ ಪಾಕಿಸ್ತಾನದಲ್ಲಿ ಬಂಧನ

Friday, August 05 2016
img

ಇಸ್ಲಾಮಾಬಾದ್: 2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಶಂಕಿತನನ್ನು ಭದ್ರತಾ ದಳ ಅಧಿಕಾರಿಗಳು ಪಾಕಿಸ್ತಾನದಲ್ಲಿ ಬಂಧಿಸಿದ್ದಾರೆ ಎಂದು ನಿನ್ನೆ ತಡರಾತ್ರಿ ಘೋಷಿಸಲಾಗಿದೆ.
ಅನೇಕ ವಿದೇಶಿಯರು ಸೇರಿದಂತೆ 160 ಮಂದಿಯನ್ನು ಬಲಿಪಡೆದುಕೊಂಡು 308 ಜನರಿಗೆ ಗಾಯವಾಗಿದ್ದ ಈ ದಾಳಿಯನ್ನು ಇಡೀ ವಿಶ್ವವೇ ಖಂಡಿಸಿತ್ತು. ಈ ದಾಳಿಗೆ ಸಂಬಂಧಿಸಿದ ಶಂಕಿತ ಸುಫಿಯನ್ ಝಫರ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈತ ದಾಳಿಯ ಮುಖ್ಯ ಶಂಕಿತ ಹಮ್ಮದ್ ಅಮಿನ್ ಸಾದಿಕ್ ಎಂಬಾತನಿಗೆ ಹಣಕಾಸಿನ ನೆರವು ಒದಗಿಸಿದ್ದ ಎಂದು ನಿಕಟ ಮೂಲಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ, ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ಶಂಕಿತನಿಗೆ 8 ದಿನಗಳ ದೈಹಿಕ ಹವಾಲತ್ತು ನೀಡಿದೆ ಎಂದು ತಿಳಿದುಬಂದಿದೆ.
ನಿರ್ದೇಶಕ ಮಜ್ಹರ್ ಕಾಕಕ್ಹೇಲ್ ನೇತೃತ್ವದ ಫೆಡರಲ್ ತನಿಖಾ ಸಂಸ್ಥೆ ಶಂಕಿತನನ್ನು ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Comments