Flash News
വാർത്തകൾക്കും,പരസ്യങ്ങൾക്കും ബന്ധപെടുക:9895854501,9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಸೌದಿ ಅರೇಬಿಯಾ : ಮಂಗಳೂರು ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ರಿಯಾದ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕಪ್ ಗೆ ಅದ್ದೂರಿ ಚಾಲನೆ

Wednesday, August 31 2016
img

ರಿಯಾದ್ :(www.asiavisionnews.com) ಮಂಗಳೂರು ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ನಡಿಯುತ್ತಿರುವ ರಿಯಾದ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಎಂ .ಸಿ .ಎ ಕ್ರಿಕೆಟ್ ಮೈದಾನದಲ್ಲಿ ಅದ್ದೂರಿ ಚಾಲನೆ ದೊರಕಿದೆ .
ಐದು ವಾರಗಳ ಕಾಲ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾವಳಿಯ ಆರಂಭಿಕ ದಿನ ಎಲ್ಲಾ ತಂಡಗಳ ಆಟಗಾರರು ಪಥ ಸಂಚಲನ ನಡೆಸಿ ಗಮನ ಸೆಳೆದರು , ನಂತರ ನಡೆದ ಪಂದ್ಯಗಳಲ್ಲಿ ಎಸ್. ಸಿ .ಎಫ್ .ಸಿ ತಂಡ ಮಂಗಳೂರು ಚಾಲೆಂಜರ್ಸ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿದರೆ , ರೈಸ್ಕೊ ತಂಡ ನ್ಯೂ ಮಂಗಳೂರು ಕ್ರಿಕೆಟರ್ಸ್ ವಿರುದ್ಧ 24 ರನ್ ಅಂತರದಲ್ಲಿ ಜಯಗಳಿಸಿತು.
ದಿನದ ಮೂರನೇ ಪಂದ್ಯದಲ್ಲಿ ಈಗಲ್ ಫ್ರೆಂಡ್ಸ್ ತಂಡ ಉಚ್ಚಿಲ ಫ್ರೆಂಡ್ಸ್ ತಂಡವನ್ನು 8 ವಿಕೆಟ್ ಗಳಿಂದ ಸುಲಭವಾಗಿ ಬಗ್ಗು ಬಡಿದರೆ , ಸೆವೆನ್ ಸ್ಟಾರ್ ತಂಡ ಯೂನಿವರ್ಸಲ್ ತಂಡದ ವಿರುದ್ಧ 23 ರನ್ ಅಂತರದ ಜಯ , ಆಪ್ಟಿಮಮ್ ವಿರುದ್ಧ ಯುನೈಟೆಡ್ ಉಳ್ಳಾಲ್ ತಂಡ 7 ವಿಕೆಟ್ ಹಾಗು ಕಿಂಗ್ಸ್ ಎಲವನ್ ಉಳ್ಳಾಲ್ ಕರಾವಳಿ ಅಲ್ ಫನಾರ್ ವಿರುದ್ಧ 8 ವಿಕೆಟ್ ಗಳ ಜಯಗಳಿಸಿತು .

Comments