antalya otogar rent a car Elektronik Sigara al ordu haberleri fatsa haberleri ordu haberleri sesli chat

ಫಿಲಿಪೈನ್ಸ್ ನಲ್ಲಿ ಸ್ಫೋಟ; 14 ಮಂದಿ ಸಾವು | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಫಿಲಿಪೈನ್ಸ್ ನಲ್ಲಿ ಸ್ಫೋಟ; 14 ಮಂದಿ ಸಾವು

Sunday, September 04 2016

ಮನಿಲಾ (www.asiavisionnews.com): ಫಿಲಿಪೈನ್ಸ್ ನ ದಾವಾವೊ ನಗರದ ಮಾರುಕಟ್ಟೆಯಲ್ಲಿ ಸ್ಫೋಟಗೊಂಡಿದ್ದು ಕನಿಷ್ಠ 14 ಜನ ಮೃತಪಟ್ಟು, 67 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಹತ್ತಿರದ ಆಸ್ಪತ್ರೆಗಳು ನೀಡಿರುವ ಮಾಹಿತಿ ಪ್ರಕಾರ ಈ ಸಾವಿನ ಸಂಖ್ಯೆ ತಿಳಿದಿದೆ ಎಂದು ಪೊಲೀಸ್ ಠಾಣೆ ಕಮ್ಯಾಂಡರ್ ಮಿಲ್ಗ್ರೆಸ್ ಡ್ರಿಜ್ ಹೇಳಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 11 ಘಂಟೆಗೆ, ನಗರ ಕೆಂಡ ಭಾಗದಲ್ಲಿರುವ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ.
ಈ ಮಾರಣಾಂತಿಕ ಸ್ಫೋಟಕ್ಕೆ ಅಬು ಸಯ್ಯಫ್ ಉಗ್ರಗಾಮಿ ಸಂಘಟನೆ ಹೊಣೆ ಹೊತ್ತಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ಅಬು ಸಯ್ಯಫ್ ಸಂಘಟನೆಯ ವಕ್ತಾರ ಅಬು ರಾಮಿ ಪ್ರಾದೇಶಿಕ ರೇಡಿಯೋ ವಾಹಿಡಿ ಡಿ ಜಡ್ ಎಂ ಎಂ ನಲ್ಲಿ ಈ ಸುದ್ದಿಯನ್ನು ಧೃಢೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು ಬೆಳಗ್ಗೆ 4 ಘಂಟೆಗೆ ರಾಷ್ಟ್ರಪತಿ ರೋಡ್ರಿಗೋ ದೂತೆರ್ಟ್ ಸ್ಫೋಟಗೊಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಾಜಧಾನಿ ಮನಿಲಾದಲ್ಲಿ ಕೂಡ ಕಟ್ಟೆಚ್ಚರ ವಹಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

Comments