ಅಮೇರಿಕ ಅಧ್ಯಕ್ಷೀಯ ಚುನಾವಣೆ:ಡೊನಾಲ್ಡ್ ಟ್ರಂಪ್ ಗೆ ಅಮೆರಿಕದ 88 ಯೋಧರ ಬೆಂಬಲ

Wednesday, September 07 2016
img

ವಾಷಿಂಗ್ ಟನ್ (www.asiavisionnews.com) : ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆ ಅಮೆರಿಕದ 88 ನಿವೃತ್ತ ಯೋಧರು ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿರುವ ನಿವೃತ್ತ ಯೋಧರು, ಕಳೆದ ಎಂಟು ವರ್ಷಗಳಿಂದ ಅಮೆರಿಕ ಸೇನೆ ಸರಿಯಾಗಿ ಪರಿಶೀಲನೆ ಮಾಡದ ಮತ್ತು ದುರ್ಬಲಗೊಳಿಸುವ ಬಜೆಟ್ ಕಡಿತಕ್ಕೆ ಒಳಗಾಗಿದೆ. ಪರಿಣಾಮವಾಗಿ ಸೇನೆ ಸಾಮರ್ಥ್ಯವನ್ನು ಕುಗ್ಗಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೇನೆಯ, ದೇಶದ ಭದ್ರತೆ ದೃಷ್ಟಿಯಿಂದ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುತ್ತೇವೆ ಎಂದು ನಿವೃತ್ತ ಯೋಧರು ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಗೆ ಅಮೆರಿಕ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವ, ಗಡಿಯನ್ನು ಭದ್ರಗೊಳಿಸುವ ಬದ್ಧತೆ ಇದೆ ಎಂದು ನಿವೃತ್ತ ಯೋಧರು ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ನಡೆದಿರುವ ತಪ್ಪುಗಳನ್ನು ಸರಿ ಪಡಿಸಲು 2016 ನೇ ವರ್ಷದ ಚುನಾವಣೆ ಒಂದು ಅವಕಾಶ ಎಂದು ನಿವೃತ್ತ ಯೋಧರು ತಿಳಿಸಿದ್ದಾರೆ.

Comments