antalya otogar rent a car ordu haberleri fatsa haberleri - instagram türk takipçi al yemek tarifleri

ವಿವಿಧ ಕ್ಷೇತ್ರ ಗಳಲ್ಲಿ ಪ್ರತಿಭಾವಂತರಾದ ಬ್ಯಾರಿ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾ ವೇದಿಕೆಯ ಗಲ್ಫ್ ಸಮಿತಿ ಅಸ್ತಿತ್ವಕ್ಕೆ : ಅಧ್ಯಕ್ಷರಾಗಿ ಶರೀಫ್ ಕೈರಂಗಳ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ವಿವಿಧ ಕ್ಷೇತ್ರ ಗಳಲ್ಲಿ ಪ್ರತಿಭಾವಂತರಾದ ಬ್ಯಾರಿ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾ ವೇದಿಕೆಯ ಗಲ್ಫ್ ಸಮಿತಿ ಅಸ್ತಿತ್ವಕ್ಕೆ : ಅಧ್ಯಕ್ಷರಾಗಿ ಶರೀಫ್ ಕೈರಂಗಳ

Friday, August 04 2017
img

*ವರದಿ:ಎಸ್.ಎ.ರಹಿಮಾನ್ ಮಿತ್ತೂರು

ಗಲ್ಫ್ ರಾಷ್ಟ್ರ ಜಿ ಸಿ ಸಿ ((www.asiavisionnews.com): ನೂತನವಾಗಿ ಬಶೀರ್ ಅಹ್ಮದ್ ಕಿನ್ಯಾರವರ ನೇತೃತ್ವದಲ್ಲಿ ರೂಪಿತಗೊಂಡ ದಕ್ಷಿಣ ಕನ್ನಡ ಬ್ಯಾರಿ ಕಲಾ ವೇದಿಕೆ ಇದರ ಶಾಖೆಯಾದ ಬ್ಯಾರಿ ಕಲಾ ವೇದಿಕೆ ಗಲ್ಫ್ ಘಟಕವು ಇತ್ತಿಚ್ಚೆಗೆ ಅಸ್ತಿತ್ವಕ್ಕೆ ಬಂದಿದೆ.

ಸೌದಿ ಅರೇಬಿಯಾ, ದುಬೈ,ಕತಾರ್,ಕುವೈಟ್,ಮಸ್ಕತ್ ಹಾಗೂ ಬಹರೈನ್ ಸೇರಿದಂತೆ ಗಲ್ಫ್ ದೇಶದ ಮೂಲೆಮೂಲೆಗಳಲ್ಲಿರುವ ಬ್ಯಾರಿ ಪ್ರತಿಭೆಗಳನ್ನು ಒಟ್ಟು ಸೇರಿಸಿ ರೂಪಿಸಿದ ಸಮಿತಿಯಾಗಿದೆ ಬ್ಯಾರಿ ಕಲಾ ವೇದಿಕೆ ಗಲ್ಫ್ ಸಮಿತಿ. ವಿವಿಧ ಕ್ಷೇತ್ರದಲ್ಲಿ ಪ್ರತಿಭಾವಂತರಾದ ಬ್ಯಾರಿ ಕಲಾವಿದರನ್ನು ಪ್ರೋತ್ಸಾಹಿಸಿ ಅವರನ್ನು ಸಮಾಜದಲ್ಲಿ ಗುರುತಿಸುವುದು, ಬ್ಲಡ್ ಡೊನೇಷನ್ ಕ್ಯಾಂಪ್ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನಮನ್ನಣೆಗೆ ಪಾತ್ರರಾಗುವುದು ಹಾಗೂ ಯುವ ಪ್ರತಿಭೆಗಳನ್ನು ಗುರುತಿಸಲು ಬ್ಯಾರಿ ಕಲಾ ಕಮ್ಮಟಗಳನ್ನು ಹಾಗೂ ಕವಿಗೋಷ್ಠಿಗಳನ್ನು ಏರ್ಪಡಿಸುವುದು ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ಅಲ್ಲದೆ ದಕ್ಷಿಣ ಕನ್ನಡ ಬ್ಯಾರಿ ಕಲಾ ವೇದಿಕೆಯ ನಡೆಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಅದಕ್ಕೆ ಬೆನ್ನೆಲುಬಾಗಿ ನಿಲ್ಲುವುದು ಗಲ್ಫ್ ಸಮಿತಿಯ ಮುಖ್ಯ ಧ್ಯೇಯವಾಗಿದೆ.

ಸಾಮಾಜಿಕ ಜಾಲತಾಣದ ಮೂಲಕ ಸಭೆ ನಡೆಸಿದ ಗಲ್ಫ್ ಸಮಿತಿಯ ಸದಸ್ಯರು 2017-18ನೇ ಸಾಲಿಗೆ ಈ ಕೆಳಗಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರಿಸಿದರು::

ಅಧ್ಯಕ್ಷರು:ಶರೀಫ್ ಕೈರಂಗಳ

ಉಪಾಧ್ಯಕ್ಷರು:
ರಾಝ್ ಕಲಾಯಿ
ಜಿ.ಕೆ. ನಾವುಂದ

ಕಾರ್ಯದರ್ಶಿ:
ಖಲೀಲ್ ಪುತ್ತೂರ್

ಜೊತೆ ಕಾರ್ಯದರ್ಶಿ:
ಅಶ್ಪಾಕ್ ಕೆ.ಸಿ. ನಗರ
ಇಮ್ರಾನ್ ತುಂಬೆ

ಕೋಶಾಧಿಕಾರಿ:
ಅಬ್ದುಲ್ ರಜಾಕ್

ಸಂಚಾಲಕರು
ರಹ್ಮತ್ ಗೂಡಿನ ಬಳಿ
ಅಬ್ದುಲ್ಲ ಕುವೈಟ್

ಸಲಹಾ ಸಮಿತಿ:
ಫಯಾಝ್.ಕೆ.ಸಿ.ರೋಡ್
ಅನ್ಸಾರ್ ಕಾಟಿಪಳ್ಳ
ಹನೀಫ್ ರಾಕ್
ತಮೀಝ್ ಉಳ್ಳಾಲ
ಸಂಶುದ್ದೀನ್ ಸಾಣೂರು
ರಿಝ್ವಾನ್ ರಿಜ್ಜು ಸಾಣೂರು

ಮಾಧ್ಯಮ ಸಲಹೆಗಾರ:
ಎಸ್. ಎ. ರಹಿಮಾನ್ ಮಿತ್ತೂರು

ಮೀಡಿಯಾ ಕನ್ವೀನರ್ಸ್ :
ತಮೀಝ್ ವಿಟ್ಲ
ಆಚಿ ಬಜಾಲ್

ಕಾರ್ಯಕಾರಿ ಸಮಿತಿ:
ನವಾಜ್ ಮಾಣಿ
ಜುಬೈರ್ ವೇಣೂರ್
ಇರ್ಷಾದ್ ಪಿ.ಕೆ.ಸುನ್ನತ್ ಕೆರೆ
ಜಾಫರ್ ಕೆ.ಸಿ. ನಗರ್
ಸಫ್ವಾನ್ ಸೆರ್ಕಳ
ಇಮ್ರಾನ್ ಬಿರಾಳಿ
ಹಂಝ ಕಾಯರ್
ರಿಝ್ವಾನ್ ರಿಜ್ಜು ಹರೆಕಳ
ಹಾರಿಸ್ ವಿಟ್ಲ
ಸಫ್ವಾನ್ ಕೂರತ್

Comments