Flash News
വാർത്തകൾക്കും,പരസ്യങ്ങൾക്കും ബന്ധപെടുക:9895854501,9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಸೂರ್ಯಗ್ರಹಣದಂದು ಜನಿಸಿದ ಮಗುವಿನ ನೆನಪಿಗಾಗಿ ಫ್ರಿಡಮ್‌ – ಮೈಕಲ್‌ ದಂಪತಿಗಳು ‘ಗ್ರಹಣ’ ಎಂದೇ ನಾಮಕರಣ

Wednesday, August 23 2017
img

ವಾಷಿಂಗ್ಟನ್‌(www.asiavisionnews.com): : ದಕ್ಷಿಣ ಕರೊಲಿನಾದ ಗ್ರೀನ್‌ವಿಲ್ಲೆ ಮೆಮೋರಿಯಲ್‌ ಆಸ್ಪತ್ರೆಯಲ್ಲಿ ಸೂರ್ಯಗ್ರಹಣದ ದಿನದಂದು ಜನಿಸಿದ ಹೆಣ್ಣು ಮಗುವಿಗೆ ‘ಎಕ್ಲಿಪ್ಸ್‌’(ಗ್ರಹಣ) ಎಂದೇ ನಾಮಕರಣ ಮಾಡಲಾಗಿದೆ. ಕಳೆದ ಸೋಮವಾರ ಸೂರ್ಯಗ್ರಹಣ ಸಂಭವಿಸಿತ್ತು.

ಗ್ರಹಣದ ವೇಳೆ ಜನಿಸಿದ ನೆನಪಿಗಾಗಿ ಫ್ರಿಡಮ್‌ – ಮೈಕಲ್‌ ದಂಪತಿಗಳು ತಮ್ಮ ಮಗುವಿಗೆ ‘ಎಕ್ಲಿಪ್ಸ್‌’(ಗ್ರಹಣ) ಎಂದು ಹೆಸರಿಟ್ಟಿದ್ದಾರೆ.

ಸೂರ್ಯಗ್ರಹಣ ಪೂರ್ಣಪ್ರಮಾಣದಲ್ಲಿ ಗೋಚರಿಸುವುದಕ್ಕೂ 7 ಗಂಟೆ ಮುನ್ನವೇ ಮಗು ಜನಿಸಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

‘ಗ್ರಹಣದ ದಿನದಂದು ಜನಿಸಿದ ‘ಎಕ್ಲಿಪ್ಸ್’ ಆಕೆಯ ಹುಟ್ಟುಹಬ್ಬ ವಿಶೇಷವಾಗಿರುತ್ತದೆ ಎಂಬುದು ನನ್ನ ನಂಬಿಕೆ’ ಎಂದು ಮೈಕೆಲ್‌ ಅಭಿಪ್ರಾಯಪಟಿದ್ದಾರೆ.

Comments