Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ನಿತಾಖತ್ ಪರಿಷ್ಕರಣೆ: ಸೌದಿಯಲ್ಲಿ ವಲಸಿಗ ಭಾರತೀಯ ಕೆಲಸಕ್ಕೆ ಕತ್ತರಿ ಸಾಧ್ಯತೆ

Thursday, August 24 2017
img

ನವದೆಹಲಿ(www.asiavisionnews.com): : ಸೌದಿ ಅರೇಬಿಯಾದ ಸ್ಥಳಿಯ ನಾಗರಿಕರಿಗೆ ಹೆಚ್ಚಿನ ಉದ್ಯೋಗ ನೀಡುವುದಕ್ಕಾಗಿ ಅಲ್ಲಿನ ಸರ್ಕಾರ ನಿತಾಖತ್ ಯೋಜನೆಯನ್ನು ಪರಿಷ್ಕರಣೆ ಮಾಡಿದ್ದು, ಭಾರತೀಯರ ಮೇಲೆ ಇದರ ಪರಿಣಾಮ ಉಂಟಾಗಲಿದೆ.

ಸೌದಿಯಲ್ಲಿ ಕೆಲಸ ಮಾಡುತ್ತಿರುವ ವಲಸಿಗ ಭಾರತೀಯರಿಗೆ ಸೌದಿ ಸರ್ಕಾರದ ನಿರ್ಧಾರದಿಂದ ಹೊಡೆತ ಬೀಳಲಿದ್ದು, ಉದ್ಯೋಗಾವಕಾಶದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸೆಪ್ಟೆಂಬರ್ ತಿಂಗಳಿನಿಂದ ಪರಿಷ್ಕೃತ ಯೋಜನೆ ಜಾರಿಗೆ ಬರಲಿದ್ದು, ಹೆಚ್ಚಿನ ಉದ್ಯೋಗಗಳಿಂದ ಭಾರತೀಯರು ವಂಚಿತರಾಗುವ ಸಾಧ್ಯತೆ ಇದೆ.

ಕಳೆದ ವರ್ಷದ ಅಂಕಿ-ಅಂಶಗಳ ಪ್ರಕಾರ ಸೌದಿಯಲ್ಲಿ ಸುಮಾರು 25 ಲಕ್ಷ ಭಾರತೀಯರು ಉದ್ಯೋಗದಲ್ಲಿದ್ದು, ಸೌದಿ ಕಾನೂನು ಬದಲಾವಣೆಯಾಗುತ್ತಿರುವುದರಿಂದ ವಲಸೆ ಹೋಗುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ.

Comments