antalya otogar rent a car ordu haberleri fatsa haberleri - instagram türk takipçi al yemek tarifleri instagram yavaş beğeni satın al

ಮೆಕ್ಸಿಕೊದಲ್ಲಿ ಭಾರೀ ಭೂಕಂಪ: ಮೃತರ ಸಂಖ್ಯೆ 60ಕ್ಕೆ ಏರಿಕೆ :ನೂರಾರು ಕಟ್ಟಡಗಳು ನೆಲಸಮ:8.2ರಷ್ಟು ತೀವ್ರತೆಯ ಭೂಕಂಪನ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮೆಕ್ಸಿಕೊದಲ್ಲಿ ಭಾರೀ ಭೂಕಂಪ: ಮೃತರ ಸಂಖ್ಯೆ 60ಕ್ಕೆ ಏರಿಕೆ :ನೂರಾರು ಕಟ್ಟಡಗಳು ನೆಲಸಮ:8.2ರಷ್ಟು ತೀವ್ರತೆಯ ಭೂಕಂಪನ

Saturday, September 09 2017
img

ಮೆಕ್ಸಿಕೊ ಸಿಟಿ(www.asiavisionnews.com): : ದಕ್ಷಿಣ ಭಾಗದ ಕರಾವಳಿಯಲ್ಲಿ ಶುಕ್ರವಾರ ಸಭವಿಸಿದ ಭಾರೀ ಭೂಕಂಪಕ್ಕೆ ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿದೆ.

8.2ರಷ್ಟು ತೀವ್ರತೆಯ ಭೂಕಂಪನದಿಂದಾಗಿ ನೂರಾರು ಕಟ್ಟಡಗಳು ಹಾನಿಗೊಳಗಾಗಿವೆ. ಭೂಕಂಪನದಿಂದ ಉಂಟಾದ ಅನಾಹುತಕ್ಕೆ ಶನಿವಾರ ಮೃತಪಟ್ಟವರ ಸಂಖ್ಯೆ 60ಕ್ಕೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭೂಕಂಪದಿಂದಾಗಿ ಜನರು ಮನೆಯಿಂದ ಹೊರಗೆ ಬೀದಿ, ಮೈದಾನಗಳಲ್ಲಿ ಇಡೀ ರಾತ್ರಿ ಕಳೆದಿದ್ದಾರೆ.

ಭೂಕಂಪದಿಂದಾದ ಹಾನಿಯಲ್ಲಿ 45 ಜನ ಸಾವಿಗೀಡಾಗಿದ್ದಾರೆ ಎಂದು ಮೆಕ್ಸಿಕೊದ ನಾಗರಿಕ ರಕ್ಷಣಾ ಇಲಾಖೆ ಖಚಿತ ಪಡಿಸಿದೆ.
ಸುನಾಮಿ ಎಚ್ಚರಿಕೆ
ಅಮೆರಿಕದ ಸುನಾಮಿ ಎಚ್ಚರಿಕೆ ಕೇಂದ್ರವು ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿರುವುದರಿಂದ ಕಡಲ ತೀರದಲ್ಲಿನ ಜನರನ್ನು ಸರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ.

ಈಗ ಭಾರೀ ಭೂಕಂಪ ಸಂಭವಿಸಿದ್ದರೂ ಭಾರೀ ಅಪಾಯದಿಂದ ಮೆಕ್ಸಿಕೊ ಪಾರಾಗಿದೆ. 1985ರಲ್ಲಿ ಉಂಟಾಗಿದ್ದ ಭೂಕಂಪಕ್ಕೆ ನಗರದ ಬಹುಭಾಗ ಸರ್ವನಾಶವಾಗಿ, ಸಾವಿರಾರು ಜನ ಪ್ರಾಣತೆತ್ತಿದ್ದರು.

Comments