Saturday, December 07, 2019
ನ್ಯೂಯಾರ್ಕ್ (www.asiavisionnews.com): ನಿಜವಾದ ವಯಸ್ಸಿಗಿಂತ ಅತಿ ಕಿರಿಯರಂತೆ ಕಾಣಿಸಿದ್ದಕ್ಕೆ ಪಾಸ್ಪೋರ್ಟ್ ಕಚೇರಿಯಲ್ಲಿ ಮಹಿಳೆಯನ್ನು ವಶಕ್ಕೆ ಪಡೆದ ವಿಲಕ್ಷಣ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.
ನಟಾಲಿಯಾ ಡಿಜೆನ್ವಿವ್ ಎಂಬ 41 ವರ್ಷದ ಮಹಿಳೆ ಟರ್ಕಿಯಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಫೋಟೊದಲ್ಲಿದ್ದದ್ದಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯಂತೆ ಕಾಣಿಸುತ್ತಿದ್ದ ಹಿನ್ನೆಲೆಯಲ್ಲಿ ನಟಾಲಿಯಾ ಡಿಜೆನ್ವಿವ್ ಅವರು ಮತ್ತೊಬ್ಬರ ಪಾಸ್ಪೋರ್ಟ್ ನ್ನು ಬಳಕೆ ಮಾಡುತ್ತಿದ್ದಾರೆ ಎಂದು ಪಾಸ್ಪೋರ್ಟ್ ಕಚೇರಿಯ ಅಧಿಕಾರಿಗಳು ಅನುಮಾನ ಅವ್ಯಕ್ತಪಡಿಸಿದ್ದಾರೆ ಎಂದು ಮಿರರ್ ಪತ್ರಿಕೆಯ ವರದಿ ಮಾಡಿದ್ದಾರೆ.
ಪಾಸ್ಪೋರ್ಟ್ ಫೋಟೊದಲ್ಲಿ ಇದ್ದದ್ದಕ್ಕಿಂತ 20 ವರ್ಷ ಕಡಿಮೆ ವಯಸ್ಸಿನವರಂತೆ ಕಾಣಿಸುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಾನು ಯುವತಿಯಂತೆ ಕಾಣಿಸುತ್ತೇನೆ ಎಂದು ಅನೇಕರು ಹೇಳಿದ್ದರು. ಆದರೆ ಇದೇ ನನ್ನನ್ನು ಪಾಸ್ಪೋರ್ಟ್ ಅಧಿಕಾರಿಗಳು ವಶಕ್ಕೆ ಪಡೆಯಲು ಕಾರಣವಾಗಲಿದೆ ಎಂಬುದು ತಿಳಿದಿರಲಿಲ್ಲ ಎಂದು ನಟಾಲಿಯಾ ಡಿಜೆನ್ವಿವ್ ಹೇಳಿದ್ದಾರೆ.