Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಅಂತರರಾಷ್ಟ್ರೀಯ ಹೆಣ್ಣುಮಗುವಿನ ದಿನ : ವಿದ್ಯಾರ್ಥಿನಿಗೆ ಒಲಿದು ಬಂದ ಬ್ರಿಟನ್ ಹೈಕಮಿಷನರ್ ಹುದ್ದೆ

Thursday, October 12 2017
img

ನವದೆಹಲಿ(www.asiavisionnews.com) : ನೊಯಿಡಾದ ಸಂಸ್ಥೆಯೊಂದರಲ್ಲಿ ಕಾನೂನು ಓದುತ್ತಿರುವ ರುದ್ರಾಲಿ ಪಾಟೀಲ್‌ ಬುಧವಾರ ಸ್ವಲ್ಪ ಸಮಯದ ಮಟ್ಟಿಗೆ ಭಾರತಕ್ಕೆ ಬ್ರಿಟನ್ನಿನ ಹೈಕಮಿಷನರ್‌ ಆಗಿದ್ದರು.

ವಾಸ್ತವದಲ್ಲಿ ರುದ್ರಾಲಿ ಬ್ರಿಟನ್‌ ಪ್ರಜೆ ಅಲ್ಲ. ಮಹಾರಾಷ್ಟ್ರದ ಲಾತೂರಿನವರು. ಅಂತರರಾಷ್ಟ್ರೀಯ ಹೆಣ್ಣುಮಗುವಿನ ದಿನದ ಅಂಗವಾಗಿ ಅವರು ಕೆಲವು ಗಂಟೆಗಳ ಕಾಲ ಭಾರತಕ್ಕೆ ಬ್ರಿಟನ್ನಿನ ಹೈಕಮಿಷನರ್‌ ಆಗಿ ಕಾರ್ಯನಿರ್ವಹಿಸಿದರು.

ಡಾಮಿನಿಕ್‌ ಅಸ್‌ಕ್ವಿತ್‌ ಅವರಿಂದ ರುದ್ರಾಲಿ ಅಧಿಕಾರ ವಹಿಸಿಕೊಂಡರು. ಕೆಲವು ಗಂಟೆಗಳ ಕಾಲ ಡಾಮಿನಿಕ್‌ ಅವರು ಉಪ ಹೈಕಮಿಷನರ್‌ ಹುದ್ದೆಯಯನ್ನು ನಿರ್ವಹಿಸಿ ರುದ್ರಾಲಿಗೆ ಭಾರತದಲ್ಲಿರುವ ಬ್ರಿಟನ್ನಿನ ಹೈಕಮಿಷನ್‌ ಹಾಗೂ ಅದು ಕಾರ್ಯನಿರ್ವಹಿಸುವ ಬಗೆಯನ್ನು ವಿವರಿಸಿದರು.

ರುದ್ರಾಲಿ ಮಾತ್ರ ಅಲ್ಲ, ಬಬಿತಾ ಅವರು ಬುಧವಾರ ಕೆಲವು ಗಂಟೆಗಳ‌ವರೆಗೆ ಭಾರತಕ್ಕೆ ಫ್ರಾನ್ಸ್‌ನ ರಾಯಭಾರಿಯಾಗಿ ಕಾರ್ಯನಿರ್ವಹಿಸಿದರು.

ಹೀನಾ ಎಂಬಾಕೆ ಭಾರತಕ್ಕೆ ಅಮೆರಿಕದ ಪ್ರಭಾರಿ ರಾಯಭಾರಿಯಾಗಿರುವ ಮೇರಿಕೇ ಲಾಸ್ ಕಾರ್ಲ್‌ಸನ್‌ ಅವರಿಂದ ಅಧಿಕಾರ ಪಡೆದುಕೊಂಡು ಒಂದಷ್ಟು ಸಮಯ ಅಮೆರಿಕದ ರಾಯಭಾರಿಯಾದರು.

ಮಧುಜಾ ನಿಗಮ್‌ ಅವರು ನ್ಯೂಜಿಲೆಂಡ್‌ನ ಹೈ ಕಮಿಷನರ್‌ ಆಗಿ ಕೆಲವು ಗಂಟೆಗಳ ಕಾಲ ಕಾರ್ಯನಿರ್ವಹಿಸಿದರು. ಇವರು ಮಾತ್ರ ಅಲ್ಲ, 19 ಇತರ ಬಾಲಕಿಯರು ನವದೆಹಲಿಯಲ್ಲಿರುವ ವಿವಿಧ ದೇಶಗಳ ರಾಜತಾಂತ್ರಿಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

Comments